ಮೌನವಾಗಿದ್ದ, ಶೂನ್ಯವಾಗಿದ್ದ 

ಜಗತ್ತಿಗೊಮ್ಮೊಮ್ಮೆ 

ಬಂದು ಬಿಡುತ್ತಾರೆ

ಕೆಲವರು...

ಹೇಳದೇ ಕೇಳದೆ ಬರುವ ಮಳೆಯಂತೆ. ಒಮ್ಮೆಲೇ..ಹಠಾತ್ತನೆ.

ಮೈಮನವನೆಲ್ಲ ಒದ್ದೆ ಮಾಡುವಂತೆ.


ಕ್ಷಣದೊಳಗೆ ಭೋರೆಂದು ಸುರಿದು

ನೆನೆಯುವ ಖುಷಿಯನ್ನು ಕೊಡುವಂತೆ


ಒಮ್ಮೆಲೇ ಮಳೆ ನಿಂತು

ಮೋಡಗಳು ಕರಗಿ, ಸಣ್ಣನೆಯ 

ಬಿಸಿಲ ಎಳೆಯಲ್ಲಿ.

ಮನೆಯತ್ತ ನಡೆದಾಗ,

ಮಳೆಯಿಲ್ಲದ ದಾರಿಯಲಿ

ಮೈ ಒಣಗಿಸುತ್ತಾ ನಡೆಯುವಂತೆ..


ಬರುತ್ತಾರೆ ಕೆಲವರು.

ಮೌನವಾಗಿದ್ದ ಶೂನ್ಯವಾಗಿದ್ದ

ಜಗತ್ತಿನೊಳಗೆ.




-- ಶೀಲಾ ಭಂಡಾರ್ಕರ್.