ಇನಿಯಾ ಕಾಣುತ್ತಿಲ್ಲ

ಮುಂದೆ ನಡೆದ ನೀನು ಕಾಣುತ್ತಿಲ್ಲ

ಹಿಂದಿರುವ ನಾನೀಗ 

ಬರಲಾಗುತ್ತಿಲ್ಲ .

ನೀನು ಲಾಲಿಸುತ್ತಿದ್ದೆ 

ದೂರವಿಲ್ಲ 

ಹತ್ತಿರದ ಕಂಬದಬಳಿ 

ದೀಪದಡಿ 

ನಾನೂ ನಿನ್ನೊಳಗೇ 

ಇರಲಾರೆ ನಡಿ   

ನೀನು ಹೋಗಿರುವೆ

ಮುಂದಡಿ.

ಹುಡುಕುತ್ತಿರುವೆ ನಿನ್ನ

ದೊರೆತೆಲ್ಲಾ ಕಂಬದಡಿ

ನೀನಿಲ್ಲ ಅಲ್ಲೆಲ್ಲಾ

ಆಗಲಾರೆ ಇಡೀ

ನೀನಿಲ್ಲದೆ ಜೀವನ

ಮುಳ್ಳಿಲ್ಲದ ಘಡಿ