ಬೆಳಗಾವಿ ಸುತ್ತ ಅರಾಜಕತೆ ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸುವವರೆಗೆ ಹೋರಾಟ ನಡೆಯುತ್ತದೆ. ಡಿಸೆಂಬರ್ 31ರಂದು ಕರ್ನಾಟಕ ಬಂದ್ ನಡೆಯಲಿದೆ ಎಂದು ಹಿರಿಯ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿದರು.

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳು ಬಂದ್ ನಡೆಸಬೇಕು. ಜೀವನಾವಶ್ಯಕ ವಸ್ತುಗಳಿಗೆ ತಡೆ ಇಲ್ಲ. ಬಹುತೇಕ ಕನ್ನಡ ಸಂಘಟನೆಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಮೊದಲಾದವರು ಬಂದ್ ಬೆಂಬಲಿಸಿದ್ದಾರೆ.