ಮಂಗಳೂರಿನ ತುಳುಭವನದಲ್ಲಿ ದಿನಾಂಕ 20-12-21 ರಂದು ಕಥಾ ಬಿಂದು ಪ್ರಕಾಶನ,ತುಳು ಎಕಾಡೆಮಿ ,ಶಾಂತಾ ಪ್ರತಿಷ್ಠಾನ ಉಪ್ಪಿನಂಗಡಿ ಸಹಯೋಗದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಂಗಳೂರಿನ ಡಾ ಸುರೇಶ ನೆಗಳಗುಳಿ ಇವರು ರಾಜ್ಯಾಧ್ಯಕ್ಷರ ಅಭಿನಂದನಾ ಭಾಷಣದಲ್ಲಿ ಮತ್ತು ಬಳಿಕ ನಡೆದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನಗಳನ್ನು ವಾಚಿಸಿದರು.ಪಿಂಗಾರ ಪತ್ರಿಕೆಯ ರೇಮಂಡ್ ಡಿ ಕುನ್ಹಾ ತಾಕೊಡೆಯವರು ಜಿಲ್ಲಾಧ್ಯಕ್ಷರ ಅಭಿನಂದನಾ ಭಾಷಣದಲ್ಲಿ ಶ್ರೀ ಯುತರ ಗುಣಗಾನ ಮಾಡಿದರು.
ತುಳು ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್ ಹಾಗೂ ಕಥಾಬಿಂದು ಪ್ರಕಾಶನಗಳ ವತಿಯಿಂದ ಉಭಯ ಅಧ್ಯಕ್ಷರುಗಳಿಗೆ ನೆನಪಿನ ಕಾಣಿಕೆ ಸಹಿತ ಸನ್ಮಾನ ವನ್ನು ಮಾಡಲಾಯಿತು .ಧರ್ಮದರ್ಶಿ ಹರಿಕೃಷ್ಣ ಪುನರೂರು ರವರು ಉದ್ಘಾಟಿಸಿ ಅಭಿನಂದಿಸಿದ ಈ ಕಾರ್ಯಕ್ರಮದಲ್ಲಿ ,ಸಿ.ಎ. ಎಸ್ ಎಸ್ ನಾಯಕ್,ಶಾಂತಾ ಕುಂಟಿನಿ ಸಹಿತ ಹಲವರು ಪಾಲ್ಗೊಂಡಿದ್ದರು
ಉಭಯ ಅಧ್ಯಕ್ಷರ ಭಾಷಣ ಮತ್ತು ಇತರ ಹಲವಾರು ಕವಿಗಳ ಕವನ ವಾಚನ ಸಹ ಜರಗಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಲಕ್ಷಣ ಮೂರ್ತಿ ಕೆ.ವಿ ವಹಿಸಿದ್ದರು.
ಕಥಾ ಬಿಂದು ಪ್ರಕಾಶನದ ಶ್ರೀ ಪಿ.ವಿ.ಪ್ರದೀಪ್ ಕುಮಾರ್ ರವರು ಈ ಸಮಾರಂಭದ ರೂವಾರಿಗಳಾಗಿದ್ದರು. ಪಿಂಗಾರ ಪತ್ರಿಕೆಯ ಮುಖ್ತಸ್ಥ ರೇಮಂಡ್ ಡಿ ಕುನ್ಹ ಸಹಕರಿಸಿದ್ದರು