ಭಾರತವು ಮಾಧ್ಯಮ ಸ್ವಾತಂತ್ರ್ಯದಲ್ಲಿ 180 ದೇಶಗಳಲ್ಲಿ 142ನೇ ಸ್ಥಾನದಲ್ಲಿ ಇರುವುದನ್ನು ಸರಿಯಾದುದಲ್ಲ ಎಂದು ಕೇಂದ್ರ ಸರಕಾರವು ಲೋಕ ಸಭೆಯಲ್ಲಿ ಲಿಖಿತ ಉತ್ತರ ನೀಡಿತು.

2019ರಲ್ಲಿ ಭಾರತವು‌ 140ನೇ ಸ್ಥಾನಕ್ಕೆ ಇಳಿದಿದ್ದರೆ ಈಗ ಇನ್ನೂ ಕೆಳಕ್ಕೆ ಜಾರಿದೆ. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಈ ಸಮೀಕ್ಷೆ ನಡೆಸಿ ಪ್ರಕಟಿಸುತ್ತದೆ.