ದಿನಾಂಕ 7.7.2022ರಂದು ಆದಾಯ ತೆರಿಗೆ ಇಲಾಖೆ ಯ ಕರ್ನಾಟಕ ಗೋವಾ ಹಿರಿಯ ಅಧಿಕಾರಿ ಶ್ಯಾಮ್ ಬನ್ಸಾರಿ ಮಂಗಳೂರು ಪ್ರಿನ್ಸಿಪಾಲ್ ಕಮಿಷನರ್ ರತ್ನ ಸ್ವಾಮಿ ಆಡಿಷನಲ್ ಕಮಿಷನರ್ ಚಂದ್ರ ಕಾಂತ್ ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿ ಹಾಗೂ ಶ್ರೀ ದಿಗಂಬರ ಜೈನ್ ಮಠ ಮೂಡು ಬಿದಿರೆಗೆ ಭೇಟಿ ನೀಡಿ ಭಗವಾನ್ ಚಂದ್ರ ಪ್ರಭ ಸ್ವಾಮಿ, ಪಾರ್ಶ್ವನಾಥ ಸ್ವಾಮಿ ಮಹಾಮಾತೆ ಕೂಶ್ಮಾ oಡಿನಿ ದೇವಿ ದರ್ಶನ ಪಡೆದುಕೊಂಡು ಬಳಿಕ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಭೇಟಿ ಮಾಡಿ ಧರ್ಮ ಚರ್ಚೆ ನಡೆಸಿದರು ಕ್ಷೇತ್ರ ಐತಿಹ್ಯ ಪಡೆದುಕೊಂಡರು.
ಈ ಸಂಧರ್ಭ ಸ್ವಾಮೀಜಿ ಅಧಿಕಾರಿಗಳಿಗೆ ಶ್ರೀಫಲ ಮಂತ್ರಾಕ್ಷತೆ ನೀಡಿ ಪ್ರಾರ್ಥಿಸಿ,ಹರಸಿ ಆಶೀರ್ವದಿಸಿದರು. ಈ ಸಂಧರ್ಭ ವ್ಯವ ಸ್ಥಾಪಕ ಸಂಜಯಂಥ ಕುಮಾರ್,ಸುಧಾಕರ್, ಪಣಿರಾಜ್ ಉಪಸ್ಥಿತರಿದ್ದರು