ನಾರಾ ನಗರದ ರೈಲು ನಿಲ್ದಾಣದ ಹೊರಗೆ ರಸ್ತೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಜಪಾನಿನ ಮಾಜೀ ಪ್ರಧಾನಿ ಶಿಂಜೋ ಅಬೆ ಮೇಲೆ ಮಾಜೀ ನೌಕಾ ಪಡೆಯ ಸೈನಿಕ ಒಬ್ಬ ಗುಂಡು ಹಾರಿಸಿದ ಕಾರಣ ಅವರೀಗ ಜೀವನ್ಮರಣದ ಸ್ಥಿತಿಯಲ್ಲಿ ಇದ್ದಾರೆ.
ಶುಕ್ರವಾರ ಬೆಳಿಗ್ಗೆ ಹನ್ನೊಂದೂವರೆ ಗಂಟೆಗೆ ಅಂದರೆ ಭಾರತೀಯ ಕಾಲಮಾನ ಎಂಟೂವರೆ ಗಂಟೆಗೆ ಶಿಂಜೋ ಅಬೆ ಅವರು ಭಾನುವಾರ ನಡೆಯುವ ಸಂಸತ್ತಿನ ಮೇಲ್ಮನೆಯ ಚುನಾವಣೆಯ ಪ್ರಚಾರ ಭಾಷಣ ಮಾಡುವಾಗ ಈ ದುರಂತ ನಡೆದಿದೆ. ಗುಂಡು ಹಾರಿಸಿದವನು ಓಡದೆ, ಗನ್ ಕೆಳಗಿಟ್ಟು ಭದ್ರತಾ ಸಿಬ್ಬಂದಿಯ ಬಂಧನಕ್ಕೆ ಒಳಗಾದ.
ಮರುಕಳಿಸಿದ ಕಾಯಿಲೆಯ ಕಾರಣಕ್ಕೆ 2020ರಲ್ಲಿ ಶಿಂಜೋ ರಾಜೀನಾಮೆ ನೀಡಿದಾಗ, ಅತಿ ದೀರ್ಘ ಕಾಲ ಪ್ರಧಾನಿ ಆಗಿದ್ದ ದಾಖಲೆ ನಿರ್ಮಿಸಿದ್ದರು. 66ರ ಶಿಂಜೋ ಅವರು ರಾಜಕೀಯ ಕುಟುಂಬದಿಂದಲೇ ಬಂದವರು. ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಅಪಾಯದಿಂದ ದೂರಾಗಿಲ್ಲ ಎಂದು ವರದಿಯಾಗಿದೆ.