ಮಂಗಳೂರು, ಮೇ 01: ಯಾವುದೇ ರೀತಿಯ ಸಂಕೋಚ ಇಲ್ಲದೆ ಕನ್ನಡದ ಎಲ್ಲಾ ಸಂಸ್ಥೆಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಂದು ತಮ್ಮ ಕನ್ನಡದ ಕೆಲಸಕ್ಕೆ ಸಹಾಯ ಸಹಕಾರ ‌ಪಡೆಯಬಹುದು. ಯಾಕೆಂದರೆ ಇದು ಕನ್ನಡದ ಮಾತೃಶ್ರೀ ಸಂಸ್ಥೆ ಎಂದು ಕಸಾಪ ಕೇಂದ್ರದ ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿಯವರು ನುಡಿದರು.

ಅವರ ಮಂಗಳೂರು ಸರ್ಕ್ಯುಟ್ ಹೌಸ್ ನಲ್ಲಿ ದಕ ಜಿಲ್ಲೆಯ ಅಧ್ಯಕ್ಷರು ಮತ್ತು ಎಲ್ಲಾ ತಾಲೂಕು, ಹೋಬಳಿ ಅಧ್ಯಕ್ಷರು, ಪದಾಧಿಕಾರಿಗಳ ಭೇಟಿಯನ್ನು ಮಾಡಿ ಮಾತನಾಡಿದರು.

ಕಸಾಪ ಸಂವಿದಾನ ತಿದ್ದುಪಡಿಯನ್ನು ಮಾಡಲು ಸಭೆಯಲ್ಲಿ ಬೇಕಾದಷ್ಟು ವಿಚಾರ ವಿಮರ್ಶೆ ಮಾಡಿಯೇ ಮಾಡಲಾಗುತ್ತದೆ. ಚುನಾವಣೆಯಲ್ಲಿ ಜಯಿಸಿದ ಆದ್ಯಕ್ಷರು ಸಾಹಿತ್ಯದ ಸೇವೆ ಮಾಡಿ ಇಳಿದು ಹೋಗುವುದು ವಿನಹ ಅದರ ಮೇಲೆ ಆಶೆಯ ಹಿಡಿತವನ್ನು ಇಡಲು ಮನಸ್ಸು ಇಲ್ಲ ಎಂದರು.

ಪುತ್ತೂರು ತಾಲೂಕು ಅಧ್ಯಕ್ಷರಾದ ಉಮೇಶ್ ನಾಯಕ್, ಮೂಲ್ಕಿ ತಾಲುಕು ಅಧ್ಯಕ್ಷ ಮಿಥುನ್ ಉಡುಪ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಯದುಪತಿ ಗೌಡ, ಮಂಗಳೂರು ನಗರ ಹೋಬಳಿ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ, ಸುರತ್ಕಲ್ ಹೋಬಳಿ ಅಧ್ಯಕ್ಷರು ಗುಣವತಿ ರಮೇಶ್, ವೇಣುರು ಹೋಬಳಿ ಅಧ್ಯಕ್ಷ ಹರೀಶ್ ಅದೂರು ಪಾಣೆ ಮಂಗಳೂರು ಹೋಬಳಿ ಅಧ್ಯಕ್ಷ ಪಿ ಮುಹಮ್ಮದ್ ,ಮೂಡುಬಿದಿರೆ ಹೋಬಳಿ ಅಧ್ಯಕ್ಷ ರಾಮಕೃಷ್ಣ ಶಿರೂರು ಮತ್ತು ಇತರ ದಕ ಕಸಾಪ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಪದಾಧಿಕಾರಿಗಳಾದ ತ್ಯಾಗಂ ಹರೇಕಳ, ಜಯಾನಂದ ಪೆರಾಜೆ, ಹರೀಶ್ ಬಂಟ್ವಾಳ,ಪ್ರವೀಣ್ ರೈ ಕುಕ್ಕುವಳ್ಳಿ, ಹೆರಿಕ್ ಪಾಯ್ಸ್ ಕಿನ್ನಿಗೋಳಿ, ಅರುಣ ನಾಗರಾಜ್, ಕೃಷ್ಣರಾಜ, ಸುಖಾಲಕ್ಷ್ಮಿ,ಮಾಧವ ಉಳ್ಳಾಳ, ಸದಾನಂದ ನಾರಾವಿ, ರಾಮಚಂದ್ರ ಪಿ, ಪೂವಪ್ಪ ನೇರಳೆಕಟ್ಟೆ, ಶಾಂತ ಪುತ್ತೂರು, ಸುಮಲತಾ ಅವರಿದ್ದರು.

ಮೊದಲಿಗೆ ದಕ ಜಿಲ್ಲಾ ಅಧ್ಯಕ್ಷರಾದ ಡಾ ಎಂಪಿ ಶ್ರೀನಾಥ ಸ್ವಾಗತಿಸಿ, ಕೇಂದ್ರದ ಅಹ್ವಾನಿತ ಡಾ ಮಾದವ ಎಂಕೆ ವಂದಿಸಿದರು.