ದಿನಾಂಕ 24 ಮಾರ್ಚ 2020 ರಂದು ಕೊವಿಡ್ 19 ಎಂಬ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ನಮ್ಮ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರು ಭಾರತದಲ್ಲಿ 21 ದಿನಗಳ ಬೀಗ ಮುದ್ರೆ ಘೋಷಿಸಿದರು. ಇದು ಬಹಳ ಒಳ್ಳೆಯ ನಿರ್ಧಾರ. ಮತ್ತು ಜನರ ಜೀವ ಉಳಿಸಲು ಮಾಡಿದ ದಿಟ್ಟ ನಿರ್ಧಾರ ಕೂಡ. ಅನೇಕ ಕೈಗಾರಿಕೆಗಳನ್ನು ಬೀಗ ಮುದ್ರೆ ಹಾಕಲಾಯಿತು ಆದರೂ ಸಹ ಆಹಾರ ಧಾನ್ಯಗಳು, ತರಕಾರಿಗಳು, ಔಷಧಿ, ಬ್ಯಾಂಕ್ ಮತ್ತು ವಿಮಾ ಕ್ಷೇತ್ರಗಳಂತಹ ಅಗತ್ಯ ವಸ್ತುಗಳ ಸರಬರಾಜನ್ನು ಸರ್ಕಾರ ಖಚಿತಪಡಿಸಿತು.
ಬೀಗ ಮುದ್ರೆ ಸಮಯದಲ್ಲಿ ಐಟಿ ಮತ್ತು ಬಿಟಿ ಕಂಪನಿಗಳ ಕಾರ್ಯಾಚರಣೆಗೆ ಅಂತರ್ಜಾಲ ಸೇವೆ ಸಾಕಷ್ಟು ಸಹಾಯ ಮಾಡಿದೆ, ಇದು ನೌಕರರಿಗೆ ಮನೆಯಲ್ಲಿ ಕುಳಿತು ಕೆಲಸ ಮಾಡಲು ಅನುವು ಮಾಡಿಕೊಟ್ಟಿತ್ತು, ಬೀಗ ಮುದ್ರೆ ಘೋಷಣೆಯಾದ್ದದ್ದು ಮಾರ್ಚ್ ಕೊನೆಯ ವಾರವಾದ್ದರಿಂದ ಮಾರ್ಚ್ ತಿಂಗಳಲ್ಲಿ ಖಾಸಗಿ ಕಂಪನಿಗಳ ಸಿಬ್ಬಂದಿಗೆ ಪೂರ್ತಿ ಸಂಬಳವನ್ನು ಪಾವತಿಸಲು ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಸೂಚನೆಗಳನ್ನು ನೀಡಿತ್ತು. 2020 ರ ಮಾರ್ಚ್ 24 ರಿಂದ ಏಪ್ರಿಲ್ 14 ರವರೆಗಿನ ಬೀಗ ಮುದ್ರೆ ಅವಧಿಯಲ್ಲಿ, ಅಂದರೆ 21 ದಿನಗಳ ಬೀಗಮುದ್ರೆ ಸಮಯದಲ್ಲಿ, ಸುಮಾರು 10 ದಿನಗಳು ಭಾರತದಲ್ಲಿ ಸರ್ಕಾರಿ ರಜಾದಿನಗಳಾಗಿದ್ದವು ಎಂಬ ಬುದ್ಧಿವಂತ ನಿರ್ಧಾರವನ್ನು ನಾವು ಗಮನಿಸಬೇಕಾಗಿದೆ. ಕೇವಲ 11 ದಿವಸ ಮಾತ್ರ ಸರ್ಕಾರಕ್ಕೆ ಮತ್ತು ಜನರಿಗೆ ಆದಾಯದ ನಷ್ಟ ವಾಗಿರುತ್ತದೆ.
ನಂತರ ದಿನಾಂಕ ಏಪ್ರಿಲ್ 12 ರ ಕೇಂದ್ರ ಸರ್ಕಾರದ ವಿವಿಧ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಸ್ತುತ ಪರಿಸ್ಥಿತಿ ಮತ್ತು ರೋಗ ಹರಡಿದ ಆಧಾರದ ಮೇಲೆ ಬೀಗ ಮುದ್ರೆ ಮತ್ತೆ 2020 ರ ಮೇ 3 ರವರೆಗೆ ವಿಸ್ತರಿಸಲಾಗಿತ್ತು. ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರವು ಪರಿಸ್ಥಿತಿ ಅನುಗುಣವಾಗಿ ಹಂತ, ಹಂತವಾಗಿ ಬೀಗ ಮುದ್ರೆ ಯನ್ನು ಸಡಿಲಗೊಳಿಸಬೇಕು ಅನ್ನುವ ಸೂಚನೆಯನ್ನು ಸಹ ನೀಡಲಾಗಿತ್ತು.
ಈ ನಡುವೆ ವಿದ್ಯುತ್, ಆಹಾರ ಮತ್ತು ಸಾರಿಗೆಯಂತಹ ಆಡಳಿತಾತ್ಮಕ ವೆಚ್ಚಗಳ ಗಣನೀಯ ಇಳಿಕೆಯಿಂದಾಗಿ ಐಟಿ ಕಂಪನಿ ಗಳಿಗೆ ಲಾಭವಾಗಿ ಪರಿಣಮಿಸಿದೆ ಆದರೂ ಐಟಿ ಕಂಪನಿಗಳಿಗೆ ತಮ್ಮ ಉದ್ಯೋಗಿಗಳಿಂದ ಕೆಲವೊಮ್ಮೆ ಸಂವಹನ ವಿಳಂಬ, ಗ್ರಾಹಕರ ಸೇವೆಗಳನ್ನು ಒದಗಿಸುವ ತೊಂದರೆ, ಸಾರಿಗೆ ವ್ಯವಸ್ಥೆಯು ಲಭ್ಯ ವಿಲ್ಲದ ಕಾರಣದಿಂದಾಗಿ ವ್ಯತಿರಿಕ್ತ ಪರಿಣಾಮಗಳನ್ನು ಸಹ ಬೀರಿದೆ.
ಐಟಿ ಮತ್ತು ಬಿಟಿ ಯೇತರ ಸಂಸ್ಥೆ ಗಳಲ್ಲಿ ಈ ಬೀಗ ಮುದ್ರೆ ಸಮಯದಲ್ಲಿ ತಮ್ಮ ಸಿಬ್ಬಂದಿಯಿಂದ ಯಾವುದೇ ಉತ್ಪಾದನೆಯನ್ನು ಹೊರತೆಗೆಯದಿರುವ ಕಾರಣ ಇತರ ಕೈಗಾರಿಕೆಗಳು ಈ ದಿನಗಳಲ್ಲಿ ಸಿಬ್ಬಂದಿ ವೇತನವನ್ನು ಕಡಿಮೆ ಮಾಡಬೇಕೆ ಅಥವಾ ಬೇಡವೇ ಎಂಬ ಸಂದಿಗ್ಧತೆಯಲ್ಲಿದೆ.
ಸ್ಟಾರ್ಟ್ಅಪ್ ಕಂಪನಿಗಳು ಧೈರ್ಯಗೆಡದೆ ಈ ಸಮಯವನ್ನು ಕಲಿಕೆಯ ದಿನ ಗಳಗಿ ತೆಗೆದುಕೊಳ್ಳಬಹುದು. ಪರಿಸ್ಥಿತಿ ಸುದರಿಸಿದ ಮೇಲೆ ಒಮ್ಮೆ ಮಾರುಕಟ್ಟೆ ಮತ್ತು ಗ್ರಾಹಕರ ಅಧ್ಯಯನದ ನಂತರ ಹೊಸ ಯೋಜನೆಗಳಿಗನ್ನು ಕಾರ್ಯಗತಗೊಳಿಸಬಹುದು.
ಕೆಲವು ಉದ್ಯಮಿಗಳಿಗೆ ತಮ್ಮ ಗ್ರಾಹಕರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದು ಕೊಳ್ಳ ಬೇಕಾಗುತ್ತದೆ.
ಉದ್ಯಮಗಳು ತಾತ್ಕಾಲಿಕವಾಗಿ ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಯನ್ನು ಹೆಚ್ಚಿಸಬೇಕಾಗಬಹುದು, ವಾರಾಂತ್ಯದಲ್ಲಿ ಸಹ ಹೆಚ್ಚಿನ ಪರಿಶ್ರಮದ ಅಗತ್ಯ ಇರುತ್ತದೆ. ಸಂಸ್ಥೆಯ ಮತ್ತು ದೇಶದ ಹಿತ ದೃಷ್ಟಿಯಿಂದ ತಮ್ಮ, ತಮ್ಮ ಸಿಬ್ಬಂದಿ ವರ್ಗಗಳ ವಿಶ್ವಾಸವನ್ನು ತೆಗೆದುಕೊಳ್ಳುವ ಪ್ರಯತ್ನಗಳನ್ನು ಮಾಡಿ.
ಪ್ರೋತ್ಸಾಹ, ಮನರಂಜನೆ ಮತ್ತು ಆಶಾವಾದಿ ಪದಗಳು ಖಂಡಿತವಾಗಿಯೂ ನೌಕರರನ್ನು ಹೆಚ್ಚು ಉತ್ಪಾದಕವಾಗಿಸಲು ಮತ್ತು ಬೀಗ ಮುದ್ರೆಯ ಪ್ರತಿಕೂಲ ಪರಿಣಾಮದಿಂದ ಹೊರಬರಲು ಸಾಧ್ಯ.
ನವೀನ ನಾಯಕ್
ಉಳ್ಳಾಲ.