ಮಂಗಳೂರು: ಕೊಂಕಣಿ ಭಾಷೆಯೇ ಉಸಿರಾಟ ಮಾಡುವ ವ್ಯಕ್ತಿ ಒಬ್ಬರು ನಮ್ಮ ಕಾಲದಲ್ಲಿ ಜೀವಿಸಿದ್ದರೆ ಅದು ಎರಿಕ್ ಒಝೆರಿಯೊ. ಅವರು ಮಾತು ಮತ್ತು ಕೃತಿಯಲ್ಲಿ ಕೊಂಕಣಿ ಆಗಿದ್ದರು ಎಂದು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ ರೇಮಂಡ್ ಡಿಕೂನ ತಾಕೊಡೆ ನುಡಿದರು.
ಅವರು ಕೆಬಿಎಂಕೆ ತನ್ನ ಕಾರ್ಯಕಾರಿ ಸಭೆಯಲ್ಲಿ ನಡೆಸಿದ ನುಡಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷ ಕೆ ವಸಂತ ರಾವ್ ಮಾತನಾಡಿ, ಕಾರ್ಮಿಕರು ಅವರ ಮನೆಯ ಜನರ ಹಾಗೆ ಆಗಿದ್ದರು. ಕಾರ್ಮಿಕರಿಗೆ ಸವಲತ್ತುಗಳನ್ನು ಪಡೆಯಲು ಎರಿಕ್ ಜೈಲು ,ಸಸ್ಪೆಂಡ್ ,ಡಿಸ್ಮಿಸ್ ಎಲ್ಲಾ ಪಡೆದರು.ತಾನೂ ಒಬ್ಬ ಕಾರ್ಮಿಕ ಮುಖಂಡ ಅದುದರಿಂದ ತನಗೆ ಬಹಳ ಹತ್ತಿರದ ಸಂಪರ್ಕ ಇತ್ತು. ಕೊಂಕಣಿ ಚಳುವಳಿಯಲ್ಲಿ ಸಕ್ರಿಯವಾದಾಗ ಮತ್ತೆ ಭೆಟಿಯಾಗುವ ಭಾಗ್ಯ ಬಂತು ಎಂದು ನೆನಪಿಗೆ ತಂದರು.
ಖಜಾಂಚಿ ಸುರೇಶ್ ಶೆಣೈ, ಗೀತಾ ಸಿ ಕಿಣಿ, ಮೀನಾಕ್ಷಿ ಪೈ, ಎಡೊಲ್ಫಸ್ ಡಿಸೋಜ, ಮತ್ತು ಡಾ ಅರವಿಂದ್ ಶಾನ್ ಭಾಗ್ ಅಗಲುದ ಕೊಂಕಣಿ ಸಾಧಕ ಮತ್ತು ಕೆಬಿಎಂಕೆ ಸದಸ್ಯರಿಗೆ ಪುಷ್ಪ ನಮನ ಸಲ್ಲಿಸಿದರು.