ಶಿವಸೇನೆಯ ಏಕನಾಥ ಶಿಂಧೆ ಮತ್ತು 11 ಶಾಸಕರು ಗುಜರಾತಿನ ಸೂರತ್‌ಗೆ ಹೋಗಿ ಲೆ ಮೆರಿಡಿಯನ್ ಹೋಟೆಲ್‌ನಲ್ಲಿ ಬಿಜೆಪಿ ಆತಿಥ್ಯದಲ್ಲಿ ಕುಳಿತಿರುವುದರಿಂದ ಮಹಾರಾಷ್ಟ್ರದ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಸರಕಾರ ಎಂವಿಎ ಅಪಾಯ ಎದುರಿಸುತ್ತಿದೆ.

ಬಂಡಾಯಗಾರರ ಸಂಖ್ಯೆ 37 ದಾಟದೆ ಸರಕಾರಕ್ಕೆ ಅಪಾಯವಿಲ್ಲ. ಆದರೆ ಅಷ್ಟು ಜನ ಅಧಿಕಾರಕ್ಕೆ ಓಡಿ ಬರುತ್ತಾರೆ ಎಂಬುದು ಬಿಜೆಪಿ ವಾದ. ಆಪರೇಶನ್ ಕಮಲ ಸಾಧ್ಯತೆ ಇದೆಯಾದರೂ ಅಷ್ಟೊಂದು ಜನರ ರಾಜೀನಾಮೆ ಕೊಡಿಸಿ ಗೆಲ್ಲಿಸುವುದು ಕಷ್ಟ ಎನ್ನಲಾಗಿದೆ.