ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಒಡಿಶಾದ ಬುಡಕಟ್ಟು ನಾಯಕಿ, ಜಾರ್ಖಂಡ್‌ನ ಮಾಜೀ ರಾಜ್ಯಪಾಲೆ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. 

ಸಂತಾಲ್ ಬುಡಕಟ್ಟು ಜನಾಂಗದ ಇವರು ಮಯೂರ್‌ಬಂಜ್ ಜಿಲ್ಲೆಯ ಬೈದಪೋಸಿಯಲ್ಲಿ ಜನಿಸಿದರು. 65ರ ಪ್ರಾಯದ ಮುರ್ಮು ಪಂಚಾಯತ್‌ನಿಂದ ಶಾಸಕಿ ಎಂದು ಬಿಜೆಪಿಯ ಬುಡಕಟ್ಟು ಮುಖವಾಗಿ ಬೆಳೆದವರಾಗಿದ್ದಾರೆ.

ಮಾಜೀ ಬಿಜೆಪಿಯ ಮಾಜೀ ‌ಕೇಂದ್ರ ಸಚಿವ ಯಶವಂತ ಸಿನ್ಹಾ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಆಗಿದ್ದಾರೆ.

ಜುಲಾಯಿ 18ರಂದು ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ.