ಇತ್ತೀಚೆಗೆ ಮುಗಿದ ಕ್ರಿಕೆಟ್ ವಿಶ್ವ ಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿದ್ದವರು ಮಂಗಳೂರು ಮೂಲದ ಊರ್ಮಿಳಾ ರೊಸಾರಿಯೋ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿ ಆಗಿದ್ದಾಗಲೆ ಎತ್ತರ ಜಿಗಿತದಿಂದ ಹಿಡಿದು ನಾನಾ ಆಟೋಟಗಳಲ್ಲಿ ಈಡುಗೊಂಡಿದ್ದ ಇವರು ಕ್ರೀಡಾ ಕ್ಷೇತ್ರದ ನಿರ್ವಹಣೆಯನ್ನೇ ವೃತ್ತಿ ಮಾಡಿಕೊಂಡಿದ್ದಾರೆ.
ಕಳೆದ ವರುಷ ಕಾಲ್ಚೆಂಡು ವಿಶ್ವ ಕಪ್ ನಡೆದಾಗ ಊರ್ಮಿಳಾ ರೊಸಾರಿಯೋರನ್ನು ಕತಾರ್ ವಿಶೇಷವಾಗಿ ಕರೆಸಿಕೊಂಡು ತನ್ನ ಫುಟ್ಬಾಲ್ ತಂಡದ ನಿರ್ವಹಣೆ ಜವಾಬ್ದಾರಿ ವಹಿಸಿತ್ತು.
ಮಾರ್ಚ್‌ನಲ್ಲಿ ಹುಟ್ಟೂರಿಗೆ ಬಂದಿದ್ದ ಇವರು ಇದೇ ಡಿಸೆಂಬರಿನಲ್ಲಿ ಭಾರತ ಪ್ರವಾಸ ಮಾಡುವವರಿದ್ದಾರೆ.