ಮಂಗಳೂರು, ಆ. 20 : 1992ರಲ್ಲಿ ಆಗಸ್ಟ್ 20  ಕೊಂಕಣಿ ಮಾತೃಭಾಷೆಗೆ ಹಬ್ಬದ ದಿನ. ರಾಷ್ಟ್ರೀಯ ಮಾನ್ಯತೆ ಪಡೆದು ನಮಗೆ ಕೊಂಕಣಿಗರಿಗೇ ಗೌರವ ಬಂದ ದಿನ ಎಂದು ಮಂಗಳೂರು ಕ್ರೈಸ್ತ  ಧರ್ಮಪ್ರಾಂತದ ಪಿಆರ್ ಒ  ರೋಯ್ ಕಾಸ್ತೆಲಿನೊ ನುಡಿದರು.

ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಜಂಟಿ ಆಶ್ರಯದಲ್ಲಿ ಭಾಷೆಗೆ ಸಂವಿಧಾನದ ಎಂಟನೆಯ ಪರಿಚ್ಛೇದದ ಮಾನ್ಯತೆ ಪಡೆದ ದಿನದ ಆಚರಣೆಯಲ್ಲಿ ಮಂಗಳೂರು ಪುರ ಭವನದಲ್ಲಿ ಕೊಂಕಣಿ ಬಾವುಟ ಆರೋಹಣ ಮಾಡಿ ಮಾತನಾಡಿದರು.

ಸ್ವಾಗತ ಮಾಡಿದ ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟೇನಿ ಆಲ್ವಾರಿಸ್ ಮಾತನಾಡಿ ಮಾತೃಭಾಷೆ ಎಂದರೆ ತಾಯಿಯ ಹಾಗೆ ಅದಕ್ಕೆ ಕರ್ನಾಟಕ  ಕೊಂಕಣಿ ಸಾಹಿತ್ಯ ಅಕಾಡೆಮಿ ಎಲ್ಲಾ ಸಂಘ ಸಂಸ್ಥೆಗಳ ಜೊತೆಯಲ್ಲಿ ಸೇರಿಕೊಂಡು ಮಾನ್ಯತಾ ದಿನ ಆಚರಣೆ ಮಾಡುತ್ತಿದೆ ಎಂದರು.

ಕೊಂಕಣಿ ಭಾಷೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮುಖಾಂತರ ಎಂಎ ಉತ್ತೀರ್ಣ ಮಾಡಿದ ಏಳು ಜನರಿಗೆ ಗೌರವ ಪತ್ರ ಮತ್ತು ಗೌರವ ಧನ ನೀಡುವ ಮೂಲಕ ಅಭಿನಂದನೆ ಮಾಡಲಾಯಿತು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ವಂದಿಸಿದರು. ಅಕಾಡೆಮಿ ಸದಸ್ಯರಾದ ಸಪ್ನಾ ಕ್ರಾಸ್ತಾ ನಿರೂಪಿಸಿದರು.