ಮಂಗಳೂರು: ಕರ್ನಾಟಕ ತುಳು ಸಾಹಿತ್ಯಅಕಾಡೆಮಿಯ ತುಳುಭವನದ ಸಿರಿಚಾವಡಿಯಲ್ಲಿ  ರೂಪಕಲಾ ಎಸ್.ಎನ್.ಭಟ್ ಬರೆದ ‘’ಬೊಳ್ಳಿಗೆಜ್ಜೆ’’ ತುಳು ಕಥೆ ತಾಗೊಂಚಿಲ್‍ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜನವರಿ 26, 2021ರಂದು, ಮಂಗಳವಾರ ಬೆಳಿಗ್ಗೆ 10:30ಕ್ಕೆ  ನಡೆಯಿತು.

ತುಳು ಸಾಹಿತ್ಯಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‍ಸಾರ್ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ನಮ್ಮ ಟಿ.ವಿ ನಿರೂಪಕರಾದ ನವೀನ್‍ ಕುಮಾರ್ ಶೆಟ್ಟಿ, ಅಕಾಡೆಮಿಯ ಸದಸ್ಯರಾದ ಚೇತಕ್ ಪೂಜಾರಿ ಉಪಸ್ಥಿತರಿದ್ದರು.