ಬೆಳ್ತಂಗಡಿ:- ಬೆಳ್ತಂಗಡಿ ಸಮೀಪದ ಮುಂಡಾಜೆ ಪರಿಸರದ ಶ್ರಿದೇವಸಿ ಇವರ ನೂತನ ಮನೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು  ಸ್ನೇಹಾಲಯ ಚ್ಯಾರಿಟೆಬಲ್ ಸಂಸ್ಥೆಯ ಉಸ್ತುವಾರಿಯಲ್ಲಿ ನೆರವೇರಿತು. ಮುಂಡಾಜೆ ದರ್ಮಕೇಂದ್ರದ ಪ್ರದಾನ ಗುರುಗಳಾದ ವಂ.ಬಿನೋಯ್ ಸೆಬೆಶ್ಟಿನ್ ರವರು ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

ಹಳ್ಳಿಮನೆ ಪ್ರವೀಣ್ ಫೆರ್ನಾಂಡಿಸ್ ಇವರು ಶಿಲಾನ್ಯಾಸಕ್ಕೆ ಸಹಕರಿಸಿದರು. ಜೊಸೇಫ್ ಕ್ರಾಸ್ತಾ, ಸ್ನೇಹಾಲಯ ದ ಸ್ಥಾಪಕರು, ಸ್ಥಳೀಯ ಮುಖಂಡರು, ಸಂಭದಿಕರೂ , ಸಂಸ್ಥೆಯ ಟ್ರಸ್ಟಿಗಳು ಹಾಜಾರಿದ್ದರು. ಸ್ನೇಹಾಲಯ ಕಳೆದ 11 ವರುಷಗಳಿಂದ ಮಾನಸಿಕ ಅಸ್ವಸ್ಥರಿಗಾಗಿ ಪುನರ್ವಸತಿ ಕೇಂದ್ರವನ್ನು ನಡೆಸುತ್ತಿದ್ದು ಸದ್ಯ 300 ಕ್ಕೂ ಅಧಿಕ ನಿವಾಸಿಗಳು ಸಂಸ್ಥೆಯಲ್ಲಿದ್ದಾರೆ.ಮನೆ ನಿರ್ಮಾಣ ಯೋಜನೆಗಳನ್ನು ಕೋರೋನಾ ಕಾಲದಲ್ಲಿ ಕಂಡ ಕೆಲವೊಂದು ಅತೀ ಬಡ ಕುಟುಂಬಗಳಿಗೆ ಯೋಗ್ಯ ವಸತಿ ಒದಗಿಸುವರೇ ಪ್ರಾರಂಭಿಸಿದ ಯೋಜನೆಯಾಗಿದ್ದು 8 ತಿಂಗಳಲ್ಲಿ 10 ಮನೆಗಳನ್ನು ಹಸ್ತಾಂತರಿಸಿರುವುದು ಶ್ಲಾಘನೀಯ. ಜಿಯೊ ಡಿ ಸಿಲ್ವ ಸ್ವಾಗತಿಸಿ, ಪ್ರಾಸ್ತವಿಕ ನುಡಿಗಳೊಂದಿಗೆ, ಉದ್ದೇಶವನ್ನು ವಿವರಿಸಿದರು. ಮಿಥುನ್ ಅಲ್ಲಿಪಾದೆ, ಒಸ್ವಾಲ್ಡ್ ಸಂಪಿಗೆ, ಸೆಬೆಸ್ಟಿನ್, ಸಂತೊಷ್ ಡಿ ಸೋಜಾ ಮಡಂತ್ಯಾರ್  ದರ್ಮಭಗಿನಿಯರು ಉಪಸ್ಥಿತರಿದ್ದರು.