ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇನ್ಫೆಂಟ್ ಮೇರಿ ಚರ್ಚ್, ಬಜ್ಜೋಡಿ ಇವರ ಸಹಯೋಗದಲ್ಲಿ ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ʼಮಾಣ್ಕಾಂ-ಮೊತಿಯಾಂʼ ಶೀರ್ಷಿಕೆಯಡಿ ಮಕ್ಕಳ ರಜಾ ಶಿಬಿರವನ್ನು ಹಮ್ಮಿಕೊಂಡಿತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದರು. 

ಮಾಂಡ್ ಸೊಭಾಣ್ (ರಿ.) ಅಧ್ಯಕ್ಷರಾದ ಲುವಿ ಜೆ. ಪಿಂಟೊರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರು ಮಾತಾನಾಡಿ, ಈ ಕಾರ್ಯಕ್ರಮವು ಮಕ್ಕಳಿಗೆ ಮತ್ತು ಯುವಜನರಿಗೆ ಕೊಂಕಣಿ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಒಂದು ಅವಕಾಶ, ಅಕಾಡೆಮಿಯಿಂದ ಇಂತಹ ಕಾರ್ಯಕ್ರಮಗಳು ಆಗುತ್ತಾ ಇರಲಿ ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ, ಇನ್ಫೆಂಟ್ ಮೇರಿ ಚರ್ಚ್ ಬಜ್ಜೋಡಿಯ ಧರ್ಮಗುರುಗಳಾದ ವಂ| ದೊಮಿನಿಕ್ ವಾಸ್, ಬಜ್ಜೋಡಿ ಚರ್ಚ್ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಪ್ರಕಾಶ್ ಸಲ್ಡಾನ್ಹಾ, ಕಾರ್ಯದರ್ಶಿಯಾದ ಎಲಿಜಬೆತ್ ಪಿರೇರಾ, ಅಕಾಡೆಮಿಯ ಸದಸ್ಯ ಸಂಚಾಲಕರಾದ ನವೀನ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಸ್ವಾಗತಿಸಿ, ನವೀನ್ ಲೋಬೊರವರು ಧನ್ಯವಾದ ಸಮರ್ಪಿಸಿದರು. ಶರಲ್ ನೊರೊನ್ಹಾರವರು ಕಾರ್ಯಕ್ರಮವನ್ನು ನಿರೂಪಿಸಿದರು.