M.L.C ಐವನ್ ಡಿಸೋಜ ಅವರು ಪತ್ರಿಕಾ ಗೋಷ್ಠಿ ನಡೆಸಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಾಜಿ ಮುಖ್ಯ ಮಂತ್ರಿ ಶ್ರೀ ಸಿದ್ದ ರಾಮಯ್ಯ ವಿರುದ್ಧ ಬೇಜವಾಬ್ದಾರಿ ಮಾಹಿತಿಗಳನ್ನು ನೀಡುವುದು ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ. ಅದಲ್ಲದೆ ಟ್ರಾಫಿಕ್ ಪೊಲೀಸ್ ನವರು ಈಗಿನ ಟ್ರಾಫಿಕ್ ನಿಯಮದಲ್ಲಿ ಬದಲಾವಣೆ ತಂದು ಜನರಿಗೆ ಸರಿಯಾದ ಮಾಹಿತಿ ನೀಡದೆ ದಂಡ ವಿಧಿಸುತ್ತಾರೆ.
ಪೊಲೀಸರು ಸಾರ್ವಜನಿಕರಿಗೆ ರಕ್ಷಣೆ ನೀಡುವ ಬದಲು ವಿಶೇಷ ದಂಡ ವಿಧಿಸುವುದನ್ನು ಹೆದರಿ ದ್ವಿಚಕ್ರ ಚಾಲಕರು ತಮ್ಮ ಜೀವವನ್ನು ಕಳೆದುಕೊಂಡ ಘಟನೆಯು ಮಂಗಳೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷವು ನಿಯಮಗಳನ್ನು ಸಮರ್ಥಿಸುತ್ತದೆ ಆದರೆ ಅದನ್ನು ಜಾರಿಗೊಳಿಸಲು ಸರಿಯಾದ ಮಾಹಿತಿ ಸಾರ್ವಜನರಿಗೆ ನೀಡಬೇಕೆಂದು ಹೇಳಿದರು.