ವರದಿ ರಾಯಿ ರಾಜ ಕುಮಾರ

ಮೂಡುಬಿದರೆ ಪುರಸಭೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಬಹಳ ವಿಜೃಂಭಣೆಯಿಂದ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆ ಗಣ ಹೋಮ, ವಾಹನ ಪೂಜೆ ಹಾಗೂ ದೀಪಾವಳಿಯ ದೀಪೋತ್ಸವ ಸಂಭ್ರಮದಿಂದ ಆಚರಿಸಲ್ಪಟ್ಟಿತು. ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಸ್ವಾತಿ ಪ್ರಭು, ಎಲ್ಲಾ ಜನಪ್ರತಿನಿಧಿ ಸದಸ್ಯರುಗಳು, ಮುಖ್ಯಾಧಿಕಾರಿ ಇಂದು, ಎಲ್ಲಾ ಅಧಿಕಾರಿ ವರ್ಗದವರು, ಸ್ವಚ್ಛತಾ ಕಾರ್ಯಕರ್ತರು, ಎಲ್ಲರೂ ಹಾಜರಿದ್ದು ಸಂತೋಷ ಸಡಗರವನ್ನು ಆಚರಿಸಿದರು.