ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಇಲ್ಲಿಗೆ ಸಮೀಪದ ಪುತ್ತಿಗೆ ಗ್ರಾಮ ಪಂಚಾಯತ್ ನ ಜಮಾ ಬಂದಿ ಕಾರ್ಯಕ್ರಮ ಸಪ್ಟೆಂಬರ್ 13ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಶ್ರೀಮತಿ ವಿದ್ಯಾ ಅವರು ವಹಿಸಿದ್ದರು. ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥ ರೋಷನ್ ಅವರು ಸಭೆ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗದೆ ಇರುವ ಬಗ್ಗೆ ಅಕ್ಷೇಪವನ್ನು ವ್ಯಕ್ತಪಡಿಸಿದರು. ಅಲ್ಲದೆ ಸಭೆಯಲ್ಲಿ ತಿಳಿಸಿದ ಸಿಸಿಟಿವಿಗಳ ಆಧಾರದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ದಂಡ ವಿಧಿಸಿ ಪಂಚಾಯತ್ ನ ಆದಾಯವನ್ನು ಹೆಚ್ಚಿಸಿದ ಬಗ್ಗೆ ವಿವರವನ್ನು ಅಪೇಕ್ಷಿಸಿದರು. 

ಗ್ರಾಮಸ್ಥರ ಪ್ರಶ್ನೆಗೆ  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ್ ರಿಂದ ಸೂಕ್ತ ಮಾಹಿತಿಯ ಉತ್ತರ ದೊರಕಲಿಲ್ಲ. ಜಮಾ ಬಂದಿ ಹಾಗೂ ಕಾಮಗಾರಿಯ ವಿವರಗಳನ್ನು ಗುಮಾಸ್ತ ಶ್ರೀಧರ್ ಅವರು ಸಭೆಯ ಮುಂದೆ ಪ್ರಸ್ತಾಪಿಸಿದರು. 

ಅಲ್ಲದೆ ಹಲವಾರು ಉಪ ಸಮಿತಿಗಳ ಸಭೆಗಳು ನಿರ್ದಿಷ್ಟ ಸಂಖ್ಯೆಗೆ ಬದಲಾಗಿ ಅರ್ಧದಷ್ಟು ಮಾತ್ರ ನಡೆದಿದೆ ಎನ್ನುವ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕು.ರಾಧಾ, ಉಪಾಧ್ಯಕ್ಷ ದಯಾನಂದ ಕುಮಾರ್, ಹಾಗೂ  ಒಟ್ಟು ಎಂಟು ಮಂದಿ ಪಂಚಾಯತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.