ಮುಂಬಯಿ, ಸೆ.22: ಸಮಾಜ ಸೇವಕ, ಹೊಟೇಲು ಉದ್ಯಮಿ ದಿ| ಕಾರ್ನಾಡು ಬಾಬು ರಾವ್ ಅವರ ಪತ್ನಿ ಶಾಂತಾ ಬಿ.ರಾವ್ (೯೯.) ಅವರು ವಯೋ ಸಹಜ ಅಸೌಖ್ಯದಿಂದ ಕಳೆದ ಶುಕ್ರವಾರ (ಸೆ.೨೦) ಗೋರೆಗಾಂವ್ ಪೂರ್ವ ಇಲ್ಲಿನ ಗೋಕುಲಧಾಮ್ನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಮೃತರು ಮೂರು ಸುಪುತ್ರರು, ಏಳು ಸುಪುತ್ರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ರಾಮ ಕ್ಷತ್ರೀಯ ಸಂಘ ಮುಂಬಯಿ ಮತ್ತು ಮಂಗಳೂರು, ಗೋಕುಲಧಾಮ ತುಳು ಕನ್ನಡ ಬಳಗ, ಗೋಕುಲಧಾಮ ಅಯ್ಯಪ್ಪ ಸೇವಾ ಸಂಘ ಅವರು ತೀವ್ರ ಸಂತಾಪ ಸೂಚಿಸಿದರು.