(ಚಿತ್ರ /  ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಮುಂಬಯಿ ಶಾಖೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯಲ್ಲಿನ (ಮಧ್ವ ಭವನ) ಶ್ರೀ ಪೇಜಾವರ ಮಠದಲ್ಲಿ ಉಡುಪಿ ಶ್ರೀ ಪೇಜಾವರ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರ ಶುಭಾಶೀರ್ವಾದ, ಮಾರ್ಗದರ್ಶನಗಳೊಂದಿಗೆ ಮಠದಲ್ಲಿನ 2023ನೇ ಸಾಲಿನ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು.  

ಜನ್ಮಾಷ್ಟಮಿ ನಿಮಿತ್ತ ಶೋಭಕೃತ ಸಂವತ್ಸರ ಶ್ರಾವಣ ಕೃಷ್ಣ ಸಪ್ತಮಿಯ ಬುಧವಾರ ಮಧ್ಯರಾತ್ರಿ ಮಠದಲ್ಲಿನ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಪೇಜಾವರ ಮಠದ ಮುಂಬಯಿ ಮುಖ್ಯಸ್ಥ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಶ್ರೀಕೃಷ್ಣನಿಗೆ ಆರತಿಗೈದು ಮಹಾಮಂಗಳರಾತಿ ಅರ್ಘ್ಯ ಪ್ರಧಾನ ನೆರವೇರಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗ ಳೊಂದಿಗೆ ಶ್ರೀಕೃಷ್ಣಾಷ್ಟಮಿಯ ಉತ್ಸವಕ್ಕೆ ಸಂಪ್ರದಾಯಿಕವಾಗಿ ಚಾಲನೆಯನ್ನಿತ್ತರು. 

ಗುರುವಾರ ಸಂಜೆ ಶ್ರೀ ಕೃಷ್ಣೈಕ್ಯ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಸ್ಮರಿಸಿ ಪೇಜಾವರ ಮಠ (ಮಧ್ವ ಭವನದ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಕೃಷ್ಣ ವೇಷ ಸ್ಪರ್ಧೆ ನಡೆಸಲಾಯಿತು. ಬಳಿಕ ದಿನೇಶ್ ಕೋಟ್ಯಾನ್, ರಾಜೇಶ್ ಕೋಟ್ಯಾನ್, ಅಶೋಕ ದೇವಾಡಿಗ ಇವರ ವೃಂದವು ಚೆಂಡೆ, ಸೆಕ್ಸೋಫೆÇೀನ್, ಬ್ಯಾಂಡು ವಾದ್ಯಗಳ ನೀನಾದದಲ್ಲಿ ವಿಟ್ಲ ಪಿಂಡಿ ಉತ್ಸವ, ಹುಲಿ ವೇಷ ಇತ್ಯಾದಿ ಕೂಡುವಿಕೆಗಳಿಂದ ಪ್ರಭಾತ್ ಕಾಲೋನಿಯಲ್ಲಿ ಶ್ರೀ ಕೃಷ್ಣನ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಪುರೋಹಿತ ವಿಷ್ಣುತೀರ್ಥ ಸಾಲಿ ಅವರು ಪುಷ್ಪಾಲಂಕಾರಗಳೊಂದಿಗೆ ಅತ್ಯಾಕರ್ಷಕವಾಗಿ ಶ್ರೀಕೃಷ್ಣನಿಗೆ ಶೃಂಗಾರಿಸಿದ್ದು, ಪುರೋಹಿತ ಸುರೇಶ್ ಭಟ್ ಕುಂಟಾಡಿ ಉತ್ಸವ ಬಲಿಯೊಂದಿಗೆ ಕೃಷ್ಣ ರಥೋತ್ಸವ ನೆರವೇರಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಿರಿಯ ಭಾಗವತ ಪೆÇಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಭಾಗವತಿಕೆಯಲ್ಲಿ, ಡಾ| ಸುರೇಂದ್ರಕುಮಾರ್ ಹೆಗ್ಡೆ ಅವರ ಪ್ರಧಾನ ಅಭಿನಯದಲ್ಲಿ ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಮಂಡಳಿ ಮುಂಬಯಿ `ಕೃಷ್ಣ ಲೀಲೆ ಕಂಸ ವಧೆ' ಯಕ್ಷಗಾನ ಪ್ರದರ್ಶಿಸಿತು. ರಾತ್ರಿ ಶ್ರೀ ಕೃಷ್ಣನ ಮಹಾ ಪೂಜೆ, ಮಹಾ ಮಂಗಳಾರತಿ ನಡೆಸಿ ಶ್ರೀಕೃಷ್ಣ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ವಾನ್ ಪ್ರಕಾಶ್ ಆಚಾರ್ಯ ರಾಮಕುಂಜ, ವಿದ್ವಾನ್ ಶ್ರೀಹರಿ ಭಟ್, ನಿರಂಜನ್ ಜೆ. ಗೋಗ್ಟೆ ವೇದಿಕೆಯಲ್ಲಿದ್ದು, ರಾಮದಾಸ ಉಪಾಧ್ಯಾಯ ಅವರು ಸುರೇಶ್ ಭಟ್ ಕುಂಟಾಡಿ ಅವರನ್ನು ಗೌರವಿಸಿದರು ಮತ್ತು ಕೃಷ್ಣ ವೇಷಧಾರಿ ಪುಟಾಣಿಗಳಿಗೆ ಬಹುಮಾನಗಳನ್ನು ಸ್ಪರ್ಧೆ ವಿತರಿಸಿದರು.

ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ (ಮುಂಬಯಿ) ಇದರ ವಿಶ್ವಸ್ಥರು, ಪದಾಧಿಕಾರಿಗಳು, ಪೇಜಾವರ ಮಠದ ಮುಂಬಯಿ ಇದರ ಪುರೋಹಿತರಾದ ಪವನ್ ಭಟ್ ಅಣ್ಣಿಗೇರಿ, ಬೆಳ್ಳೆ ರಾಮಚಂದ್ರ ಸಾಮಗ, ಉಂಡಾರು ರಾಘು ಭಟ್ ಮತ್ತಿತರ ಪುರೋಹಿತರು, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥರು, ಶೇಖರ್ ಜೆ.ಸಾಲಿಯಾನ್ ಸೇರಿದಂತೆ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನ್ಮಾಷ್ಟಮಿ ಸಂಭ್ರಮಿಸಿದರು.