ಇತ್ತೀಚೆಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಮಟ್ಟದ ಕ್ರೀಡಾಕೂಟದಲ್ಲಿ ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು ಮತ್ತು ಪಿಇಡಿ, ಶ್ರೀಮತಿ ವನೀಶಾ ವಿ ರೋಡ್ರಿಗಸ್ ಮತ್ತು ಸಹಾಯಕ ಪಿಇಡಿಶ್ರೀ ಸುಧೀರ್ಎಂ,  ಅವರ ಮಾರ್ಗದರ್ಶನದಲ್ಲಿ ಕಾಲೇಜಿಗೆ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 7 ಸೆಪ್ಟೆಂಬರ್ 2023 ರಂದು ಜಿಐಟಿ, ಬೆಳಗಾವಿಯಲ್ಲಿ ನಡೆದ ವಿಟಿಯುರಾಜ್ಯ ಮಟ್ಟದ 63 ಕೆ.ಜಿ. ಗಿಂತ ಕೆಳಗಿನ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿಶುಭ್ರಾ ರೈ ಡಿ ಪ್ರಥಮ ವರ್ಷದ ಬಿಇ(ಸಿ.ಎಸ್.ಬಿ.ಎಸ್) ವಿದ್ಯಾರ್ಥಿನಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಶ್ವವಿದ್ಯಾಲಯ ಮಟ್ಟದಲ್ಲಿಈ ಅಗಾಧ ಸಾಧನೆಗಾಗಿ ಶುಭ್ರಾ ರೈ ಡಿಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಎಸ್.ಜೆ.ಇ.ಸಿಆಡಳಿತ ಮಂಡಳಿ ಅಭಿನಂದಿಸುತ್ತದೆ.