ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆಯ ಪುರಸಭೆಯ ಮಾಸಿಕ ಸಭೆಗಳಲ್ಲಿ ಕಳೆದ 6-8 ತಿಂಗಳುಗಳಿಂದ ಈ ಕೆಳಗಿನ ಹಲವಾರು ವಿಷಯಗಳ ಬಗ್ಗೆ ಹಲವಾರು ಬಾರಿ ಚರ್ಚೆಗಳಾದರೂ ಕೂಡ ಅವುಯಾವುವೂ ಕಾರ್ಯಗತ ಗೊಂಡಿಲ್ಲ ಎನ್ನುವುದು ಮೂಡುಬಿದಿರೆ ನಾಗರಿಕರಿಗೆ ಪ್ರತಿದಿನ ಎಂಬಂತೆ ಕಂಡುಬರುತ್ತಿದೆ.
ಅಂಗಡಿಗಳವರ ಫುಟ್ಪಾತ್ ಅದಿಕ್ರಮಣವನ್ನು ನಿವಾರಿಸುವುದಕ್ಕೆ ಪುರಸಭಾ ಅಧಿಕಾರಿಗಳಿಗೆ ಎಷ್ಟು ಸಮಯ ಬೇಕಾಗುತ್ತದೆ?
ಕೇವಲ ಒಂದೆರಡು ತಿಂಗಳುಗಳಲ್ಲಿ ಎಲ್ಲವನ್ನೂ ಸರಿಪಡಿಸಬಹುದಾದ ಪುರಸಭಾ ಅಧಿಕಾರಿಗಳು ಇದಕ್ಕೆ ಸ್ಪಂದಿಸದೆ ಇರುವುದು ಏನನ್ನು ಸೂಚಿಸುತ್ತದೆ. ನೋಟೀಸು ನೀಡಿ 15 ದಿನಗಳ ಒಳಗೆ ಫುಟ್ಪಾತ್ ಅತಿಕ್ರಮಣವನ್ನು ತೆರವುಗೊಳಿಸಿ ಮತ್ತೆಂದಿಗೂ ಫುಟ್ಪಾತ್ ಅತಿಕ್ರಮಣ ಮಾಡಿದಂತೆ ಮಾಡಬಹುದಾದ ಕಾರ್ಯಕ್ಕೆ ಆರು ತಿಂಗಳುಗಳಿಗೂ ಹೆಚ್ಚು ಸಮಯ ಬೇಕೇ?
ಬಸ್ಸು ನಿಲ್ದಾಣದ ಅವ್ಯವಸ್ಥೆಗಳ ಬಗ್ಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಎಲ್ಲ ಸದಸ್ಯರುಗಳು ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಿದರು ಕೂಡ ಮುಖ್ಯ ಅಧಿಕಾರಿಗಳು ಬಸ್ಸು ನಿಲ್ದಾಣದಲ್ಲಿಯೇ ಎಲ್ಲಾ ವರ್ತಕರ ಸಭೆಯನ್ನು ಕರೆದು, ಶಾಸಕರನ್ನು ಕರೆದು ಮೀಟಿಂಗ್ ನಡೆಸಿ ಸರಿಪಡಿಸುವುದಕ್ಕೆ ಐದು ತಿಂಗಳಿಗೂ ಹೆಚ್ಚು ಸಮಯ ಬೇಕೇ? ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸ್ವತಹ ಶಾಸಕರಲ್ಲಿ ವಿಚಾರಿಸಿದರು ಕೂಡ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಉಪೇಕ್ಷಿಸುತ್ತಿರಲು ಕಾರಣವೇನು?
ಬಸ್ಸು ನಿಲ್ದಾಣದಲ್ಲಿರುವ ಜೈನ ಸಮುದಾಯದವರ ಹಳೆಯ ಕಿತ್ತು ಹೋಗಿರುವ ಕುಡಿಯುವ ನೀರಿನ ವ್ಯವಸ್ಥೆಯ ಕಟ್ಟಡವನ್ನು ನಿವಾರಿಸಲು ನಾಲ್ಕೈದು ಬಾರಿ ಮಾಧ್ಯಮದವರು ಹಾಗೂ ಸಾರ್ವಜನಿಕರು ದೂರನ್ನು ನೀಡಿದರು ಕೂಡ ಸಂಬಂಧ ಪಟ್ಟ ಸಂಸ್ಥೆಯವರಾಗಲಿ, ಪುರಸಭೆಯವರಾಗಲಿ ಆ ಪ್ರದೇಶವನ್ನು ಸ್ವಚ್ಛಗೊಳಿಸದೆ ಯಥಾವತ್ತಾಗಿ ಕೊಳಕು ನಾರುವಂತೆ ಬಿಟ್ಟಿರುವುದರ ಗೂಡಾರ್ಥವೇನು?
ಆ ಪ್ರದೇಶದಲ್ಲಿ ಹಲವಾರು ಮಂದಿ ತಮ್ಮ ದೇಹ ಭಾಧೆಯನ್ನು
ಪೂರೈಸಿಕೊಳ್ಳುತ್ತಿರುವವರ ಮೇಲಿನ ಕರುಣೆಯೇ? ಬಸ್ಸು ನಿಲ್ದಾಣದ ಶೌಚಾಲಯವನ್ನು ಸರಿಪಡಿಸಿ ಸ್ವಚ್ಛವಾಗಿ ಇರಿಸಲು, ಎಷ್ಟು ಸಮಯ ಬೇಕಾಗುವುದು? ಕಳೆದ ನಾಲ್ಕಾರು ತಿಂಗಳುಗಳಿಂದ ಹವ್ಯಾಹತವಾಗಿ ಮೂಡುಬಿದಿರೆ ಪರಿಸರದ ಹೆದ್ದಾರಿಗಳಲ್ಲಿ ಸಂಚರಿಸುತ್ತಿರುವ 10 -14 ಚಕ್ರಗಳ ಬೃಹತ್ ಗಾತ್ರದ ಲಾರಿಗಳು ನಿರಂತರವಾಗಿ ದಿನಕ್ಕೆ 30- 40 ಬಾರಿ ಸಂಚರಿಸಿ ರಸ್ತೆಗಳೆಲ್ಲವೂ ನಿರ್ಣಾಮವಾಗಿದ್ದರೂ, ಶಾಸಕರಾಗಲಿ, ಠಾಣಾಧಿಕಾರಿಗಳಾಗಲಿ ಕ್ರಮ ಕೈಗೊಳ್ಳದೆ ಇರುವುದು ಯಾವುದರ ಸೂಚಕ? ಅವರ ಕೈಗಳನ್ನು ತಡೆಯುತ್ತಿರುವವರು ಯಾರು? ಈ ಬಗ್ಗೆ ಸಾರ್ವಜನಿಕವಾಗಿ ಮಾಹಿತಿಯನ್ನು ನೀಡುತ್ತಾರಾ?
ಮೂಡಬಿದಿರೆ ಠಾಣಾಧಿಕಾರಿಯಾಗಿದ್ದು ಅತ್ಯಂತ ಸಮರ್ಥವಾಗಿ ಮುಖ್ಯ ರಸ್ತೆಯನ್ನು ವಾಹನಗಳಿಂದ ವ್ಯವಸ್ಥಿತಗೊಳಿಸಿದ್ದ ಭಾರತೀಯರಂತೆ ಈಗಿನ ಠಾಣಾಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದಕ್ಕೆ ಕಾರಣವೇನು?
ಸಾರ್ವಜನಿಕರ ಪರವಾಗಿ ಈ ಎಲ್ಲ ಪ್ರಶ್ನೆಗಳನ್ನು ಶಾಸಕರು ಹಾಗೂ ಪುರಸಭಾ ಮುಖ್ಯ ಅಧಿಕಾರಿಗಳ ಎದುರು ಆರನೇಯ ಬಾರಿ ಇಡಲಾಗುತ್ತಿದೆ. ಈಗಲಾದರೂ ಮಾಧ್ಯಮಕ್ಕೆ ಲಿಖಿತ ಉತ್ತರವನ್ನು ಸಲ್ಲಿಸುವಲ್ಲಿ ಇವರು ಶಕ್ತರಾಗುವವರೆ ಎಂದು ತಿಳಿಯಬೇಕಾಗಿದೆ.