68ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳು 2020ನೇ ವರುಷದ ಸಿನಿಮಾಗಳಿಗಾಗಿ ಪ್ರಕಟವಾಗಿದ್ದು ತಮಿಳಿನ ಸೂ(ಶೂ)ರರೈ ಪೋಟ್ರು ಚಿತ್ರವು ಅತ್ಯುತ್ತಮ ಚಿತ್ರವೆಂದು ಸ್ವರ್ಣ ಕಮಲ ಗೆದ್ದಿದೆ.

ಅದರ ನಾಯಕ ಸೂರ್ಯ ಮತ್ತು ತಾನಾಜಿ ಚಿತ್ರದ ಅಜಯ ದೇವಗನ್ ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಸೂರರೈ ಪೋಟ್ರು ಚಿತ್ರದ ನಾಯಕಿ ಅಪರ್ಣಾ ಬಾಲಮುರಳಿ ಅತ್ಯುತ್ತಮ ನಾಯಕಿ ಪ್ರಶಸ್ತಿ ಗೆದ್ದಿದ್ದಾರೆ.

ಮರಾಠಿಯ ಫ್ಯುನೆರಲ್ ಚಲನಚಿತ್ರವು ಅತ್ಯುತ್ತಮ ಸಾಮಾಜಿಕ ಕಾಳಜಿಯ ಚಿತ್ರ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ.

ಎಂಟನೆಯ ಪರಿಚ್ಛೇದದಲ್ಲಿ ಇಲ್ಲದ ಭಾಷೆಗಳಲ್ಲಿ ತುಳುವಿನ ಜೀಟಿಗೆ ಚಿತ್ರವು ಅತ್ಯುತ್ತಮ ಚಿತ್ರ ಎನಿಸಿ ರಜತ ಕಮಲ ಗೆದ್ದಿದೆ.

ಕನ್ನಡದ ಪ್ರಾದೇಶಿಕ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ತಲೆದಂಡ ಪಡೆದಿದ್ದು ರಜತ ಕಮಲ ಪಡೆದಿದೆ. ಡೊಳ್ಳು ಮತ್ತು ನಾದದ ನವನೀತ ಚಿತ್ರಗಳೂ ಪ್ರಶಸ್ತಿ ಭಾಜನವಾಗಿವೆ.

ಅಯ್ಯಪ್ಪನುಂ ಕೋಶಿಯುಂ ಚಿತ್ರದ ನಿರ್ದೇಶಕ ದಿವಂಗತ ಸಚ್ಚಿದಾನಂದನ್ ಕೆ. ಆರ್‌. ದೇಶದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.