ಮಂಗಳೂರು, ಜು 23: ಭಾರತೀಯ ಸ್ಕೌಟ್ಸ್ ಗೈಡ್ಸ್ ಮಂಗಳೂರು ನಗರ ಉತ್ತರ ವಿಭಾಗದಿಂದ  ವನಮಹೋತ್ಸವ ಕಾರ್ಯಕ್ರಮವು ಕದ್ರಿಮಲ್ಲಿಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಠಾರದಲ್ಲಿ ಹೂವಿನ ‌ಗಿಡಗಳನ್ನು ನೆಡುವ ಮೂಲಕ ಮಾಡಲಾಯಿತು.

ಗಿಡಗಳ ದಾನಿಗಳಾದ ಲತಾ ನಾಯ್ಕ್ ಹಾಗೂ ಕೇಶವ ರಾಮಕುಂಜ ಅವರು‌  ಮೊದಲ ಗಿಡವನ್ನು ನೆಟ್ಟು ಶುಹಾರೈಸಿದರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕದ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ, ಪ್ರದೀಪ್ ಆಳ್ವ, ದಿನೇಶ್ ಕೊಡಿಯಾಲ್ ಬೈಲ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಮಂತ್ ವಿಜಯ್ ,ಶಾಲಾ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಮೊದಲಿಗೆ ಸ್ಕೌಟ್ಸ್ ಗೈಡ್ಸ್ ಅದ್ಯಕ್ಷರಾದ ವಸಂತ ರಾವ್ ಕೆ ಸ್ವಾಗತಿಸಿದರು.

ಕಾರ್ಯದರ್ಶಿ ನಾರಾಯಣ ಎಸ್ ನಿರ್ವಹಣೆ ಮಾಡಿದರು, ಖಜಾಂಚಿ ಸಂದ್ಯಾ ಸಂಯೋಜನೆ ಮಾಡಿದರು, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ದೊರೊತಿ ಜೆ ಜೆ ಡಾಯಸ್ ವಂದಿಸಿದರು.