ಉಕ್ರೇನಿನಲ್ಲಿ ಮೃತನಾದ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಶವವು ಮಾರ್ಚ್ 21ರಂದು ಅವರ ಹುಟ್ಟೂರು ಚಳಗೇರಿ ತಲುಪಿದಾಗ ಇಡೀ ಊರು ಮೌನಕ್ಕೆ ಜಾರಿದರೆ, ನಡುವೆ ಅಳು ದನಿ ಇಣುಕಿತು.

ಎಮಿರೇಟ್ಸ್‌ 568 ವಿಮಾನದಲ್ಲಿ ನಸುಕಿನಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶವ ತಲುಪಿದೆ. ಅಲ್ಲಿಂದ ಪೋಲೀಸು ಕಾವಲಿನಲ್ಲಿ ಆಂಬುಲೆನ್ಸ್‌ನಲ್ಲಿ ಹಾವೇರಿ ಜಿಲ್ಲೆಯ ಚಳಗೇರಿಗೆ ತರಲಾಗಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಬಂಧಿಸಿದ ಕಾಗದಪತ್ರಗಳನ್ನು ಮೃತನ ಮನೆಯವರಿಗೆ ಒಪ್ಪಿಸಿದರು. ಕೆಲವು ಲಿಂಗಾಯತ ಸಂಪ್ರದಾಯದ ಬಳಿಕ ಮೃತ ದೇಹವನ್ನು ದಾವಣಗೆರೆ ಮೆಡಿಕಲ್ ಕಾಲೇಜಿಗೆ ನೀಡಲಾಯಿತು.