ಕೇರಳದ ಕೋಳಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಜ್ವರ ಹರಡಿ ಕ್ವಾರಂಟೈನ್ ವಿಧಿಸುತ್ತಲೇ, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಬಗೆಗೆ ಕಟ್ಟೆಚ್ಚರ ವಹಿಸಲಾಗಿದೆ.
ಅಟಂಚೇರಿ, ಮರುತೊಂಕರಾ, ತಿರುವಳ್ಳೂರ್, ಕುಟ್ಟಿಯಡಿ, ಕಾಯಕ್ಕೊಡಿ, ವಿಲ್ಲಪಳ್ಳಿ, ಕವಿಲಂಪಾರ ಈ ಏಳು ಗ್ರಾಮಗಳನ್ನು ಕಂಟೈನ್‌ಮೆಂಟ್ ವಲಯ ಮಾಡಿ ಕ್ವಾರಂಟೈನ್ ವಿಧಿಸಲಾಗಿದೆ. ಈ ಪ್ರದೇಶದ ಒಳಗೆ ಯಾರೂ ಹೋಗಬಾರದು, ಹೊರಗೆ ಯಾರೂ ಬರಬಾರದು ಎಂದು ಜಿಲ್ಲಾಧಿಕಾರಿ ಎ. ಗೀತಾ ಆದೇಶ ಹೊರಡಿಸಿದ್ದಾರೆ.
ಈಗಾಗಲೆ ನಿಫಾ ವೈರಸ್ ಜ್ವರದಿಂದ ಇಬ್ಬರ ಸಾವಾಗಿದೆ. ಇದು ಬಾಂಗ್ಲಾದೇಶ ಪ್ರಭೇದದ ವೈರಸ್ ಎನ್ನಲಾಗಿದೆ. ಕೋಳಿಕ್ಕೋಡ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೊಬಾಯಿಲ್ ಪ್ರಯೋಗಾಲಯವನ್ನು ಇದಕ್ಕಾಗಿ ಸ್ಥಾಪಿಸಲಾಗಿದೆ.