ಎಫ್ಐಆರ್ ದಾಖಲಾಗುತ್ತಲೇ ಮಾಧ್ಯಮಗಳು ಯಾರೋ ಇಲ್ಲವೇ ಸೂಚಿತ ಆರೋಪಿ ಆ ತಪ್ಪು ಮಾಡಿರುವಂತೆ ತಮ್ಮದೇ ತೀರ್ಪು ನೀಡಿ ಸುದ್ದಿ ಪ್ರಕಟಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಹೇಳಿದರು.
ಮಾಧ್ಯಮಗಳನ್ನು ನಿರ್ಬಂಧಿಸುವುದು ಸಾಧ್ಯವಿಲ್ಲ. ಆದರೆ ಸುದ್ದಿ ಮೂಲವನ್ನು ನಿರ್ಬಂಧಿಸಬಹುದು. ಅದಕ್ಕಿಂತ ಮುಖ್ಯವಾಗಿ ಮಾಧ್ಯಮಗಳೇ ತಮ್ಮ ಸುದ್ದಿ ಮಿತಿಗಳನ್ನು ಹೊಂದಿರಬೇಕು ಎಂದು ಸಿಜೆಐ ತಿಳಿಸಿದರು.
2005ರ ಅರುಷಿ ತಲ್ವಾರ್ ಕೊಲೆ ಮೊಕದ್ದಮೆಯಲ್ಲಿ ಹೆತ್ತವರು ಮರ್ಯಾದಾ ಹತ್ಯೆ ಮಾಡಿದ್ದಾರೆ ಎಂದು ಪತ್ರಿಕೆಗಳೇ ತೀರ್ಪು ನೀಡಿದ್ದವು. ಅದು ಮುಂದೆ ಭಾರೀ ಟೀಕೆಗೆ ಒಳಗಾದುದನ್ನು ಅವರು ನೆನಪಿಸಿದರು.