ಕಳೆದ ವಾರ ಗ್ರೀಸ್‌ನಲ್ಲಿ ಹಾನಿ ಉಂಟು ಮಾಡಿದ್ದ ಡೇನಿಯಲ್ ಚಂಡಮಾರುತವು ಮೆಡಿಟರೇನಿಯನ್ ಸಮುದ್ರ ದಾಟಿ ಲಿಬಿಯಾಕ್ಕೆ ಬಡಿದು ಅಪಾರ ಹಾನಿ ಉಂಟುಮಾಡಿದೆ. ಸಾವು ಸಂಖ್ಯೆಯು 10,000 ಮುಟ್ಟಿದೆ. ಲಕ್ಷಾಂತರ ಜನರು ನೆಲೆ ಕಳೆದುಕೊಂಡರು. ದೆರ್ನಾ ನಗರದ ಬಳಿಯ ಅಣೆಕಟ್ಟು ಒಡೆದು ಒಮ್ಮೆಗೇ ಏರಿದ ಪ್ರವಾಹದಲ್ಲಿ ನಗರ ಮುಳುಗೇಳುತ್ತಿದೆ. ಅಲ್ಲಿ ಗುಂಪಾಗಿ ಈಗ ಶವಗಳು ಸಿಗತೊಡಗಿವೆ.

ಪುರಾತನ ಸೈರೆನ್, ಶಹಾತ್ ನಗರಗಳ ಸಂಪರ್ಕ ರಸ್ತೆಗಳು ಕೊಚ್ಚಿ ಹೋಗಿವೆ. ಚಾರಿತ್ರಿಕ ನೆಲೆಗಳು ಹಾನಿಗೀಡಾಗಿವೆ. ಏನೂ ಇಲ್ಲದೆ, ಏನೂ‌ ಸಿಗದೆ ಜನರು ಬೊಬ್ಬಿಡುತ್ತಿರುವುದು ಕಂಡು ಬಂದಿದೆ.