ಮಂಗಳೂರು: ಇಲ್ಲಿನ ಬಳ್ಕುಂಜೆ ಗ್ರಾಮದ ಕನಿ೯ರೆ ನಿವಾಸಿ, ಮುಂಬೈ ಉದ್ಯಮಿ  ಡಾ.ವಾಮನ ಎಸ್.ಕನಿ೯ರೆ ( 77) ಇವರು ಹೖದಯಾಘಾತದಿಂದ ಬುಧವಾರ ಮಧ್ಯಾಹ್ನ ಮುಂಬೈ ಮನೆಯಲ್ಲಿ ನಿಧನರಾದರು. ಮೖತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ಮುಂಬೈ ಗಾಣಿಗ ಸಾಫಲ್ಯ ಸೇವಾ ಸಂಘದ  ಹಿರಿಯ ಪದಾಧಿಕಾರಿಯಾಗಿ, ಸಾಫಲ್ಯ ಪತ್ರಿಕೆ ಸ್ಥಾಪಕ ಸಂಪಾದಕರಾಗಿ, ಮುಂಬೈ ಗೀತಾ ಶಿಪ್ಪಿಂಗ್ ಕಂಪನಿ ಇದರ ಆಡಳಿತ ನಿರ್ದೇಶಕರಾಗಿದ್ದರು. ಮುಂಬೈ  ಸಾಫಲ್ಯ ಮತ್ತು ಮೊಗವೀರ ಪತ್ರಿಕೆ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಸಫಲ ಪತ್ರಿಕೆಗೆ ಅಂಕಣಕಾರರಾಗಿದ್ದರು. ಮುಂಬೈ  ತುಳುಕೂಟ, ಕನ್ನಡ ಸಂಘಗಳ ಸದಸ್ಯರಾಗಿದ್ದರು. 

ಇವರ ನಿಧನಕ್ಕೆ ಜಿಲ್ಲಾ ಗಾಣಿಗ ಯಾನೆ ಸಫಲಿಗ ಸಂಘ ಸಹಿತ ಮುಂಡ್ಕೂರು, ಬಂಟ್ವಾಳ, ಎಡಪದವು, ಮೂಡುಬಿದ್ರೆ ಗಾಣಿಗ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.