1943ರಲ್ಲಿ ಆರಂಭವಾದ ಮಂಗಳೂರಿನ ಕೊಂಕಣಿ ನಾಟಕ ಸಭಾದವರು 1948ರಲ್ಲಿ ಕಟ್ಟಿದ ಡಾನ್ ಬಾಸ್ಕೋ ಹಾಲ್ ನಾಟಕಗಳಿಗೆಂದೇ ಈ ಸುತ್ತಿನಲ್ಲಿ ಆರಂಭವಾದ ಮೊದಲ ರಂಗ ಮಂದಿರವಾಗಿದೆ. ಅದರ ನವೀಕರಣ ಆಗಿದ್ದು ಹೊಸ ತಾಗಿಸಿದ ಹಾಲ್ ಜನವರಿ 27ರಂದು ಉದ್ಘಾಟನೆ ಆಗಲಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ಆರಂಭದಲ್ಲಿ ಡಾನ್ ಬಾಸ್ಕೋ ಮೂರ್ತಿಗೆ ಕಿರೀಟ ತೊಡಿಸುವ ಮೂಲಕ ಪಾವುಲ್ ಮೆಲ್ವಿನ್ ಡಿಸೋಜಾ ಪತ್ರಿಕಾಗೋಷ್ಠಿ ಆರಂಭಿಸಿದರು.

ಕೊಂಕಣಿ ನಾಟಕ ಸಭಾ 73 ವರುಷಗಳ ಹಿಂದೆ ಆರಂಭವಾಯಿತು. ಕಲಾವಿದ ಸದಸ್ಯರೇ‌ ಇದನ್ನು ದಾನಿಗಳ ನೆರವಿನಿಂದ ಕಟ್ಟಿಸಿದ್ದಾರೆ. ಒಂದು ವರುಷದ ಸತತ ದುಡಿಮೆಯಿಂದ ಈ ಕಟ್ಟಡ ಮತ್ತೆ ಮೇಲೆದ್ದಿದೆ. ಇದು ನಾಟಕ ರಂಗ ಹೊರತು ವಾಣಿಜ್ಯ ಸಂಕೀರ್ಣ ಅಲ್ಲ ಎಂದು  ಅವರು ಹೇಳಿದರು.

ಮಂಗಳೂರು ಬಿಶಪ್ ಡಾ. ಪೀಟರ್ ಪಾವ್ಲ್ ಸಲ್ದಾನಾ ಉದ್ಘಾಟನೆಯಂದು ಆಶೀರ್ವಚನ ನೀಡುವರು. ಪೋಲೀಸು ಕಮಿಶನರ್ ಶಶಿಕುಮಾರ್ ಉದ್ಘಾಟನೆ ಮಾಡುವರು. 

ಇದರಲ್ಲಿ ತುಳು ಇತ್ಯಾದಿ ಭಾಷೆಗಳ ನಾಟಕ, ಯಕ್ಷಗಾನ, ಭರತನಾಟ್ಯ ಇತ್ಯಾದಿ ನಡೆದಿದೆ. ನಾಟಕವನ್ನು ಆಡಲು ಈ ಹಾಲನ್ನು ಲಾಭ ನೀಡದೆ ನೀಡಿದ್ದೇವೆ. ಈ ನಾಟಕ ಸಭಾದಲ್ಲಿ 14 ಸಮಿತಿಗಳು ಇದ್ದು, ಮಹಿಳೆಯರ ಒಂದು ಪ್ರತ್ಯೇಕ ಸಮಿತಿಯೂ ಇದೆ ಎಂದು ಅವರು ಹೇಳಿದರು.

ಆರಂಭದಲ್ಲಿ ಪತ್ರಕರ್ತ ರೇಮಂಡ್‌ ಡಿಕೂನ್ ಹಾಲ್ ಬಗೆಗೆ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಲಿಸ್ಟನ್ ಡಿಸೋಜಾ, ಫ್ಲಾಯ್ಡ್‌ ಡೆಮೆಲೊ, ಲೆಸ್ಟಸ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.