ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜೆಡಿಎಸ್ ಸಮಿತಿಯ ಕಾರ್ಯಾಧ್ಯಕ್ಷ ನಝೀರ್ ಉಳ್ಳಾಲ್  ಅವರು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸುವಂತೆ ಎರಡು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಿದರು. ಮೃತರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ,ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಜಾಕೆ ಮಾದವ ಗೌಡ ಸುಶೀಲ್ ನೊರೊನ್ಹಾ ಅವರ ಅಗಲುವಿಕೆಯು ಜಿಲ್ಲಾ ಜೆಡಿಎಸ್ ಗೆ ತುಂಬಲಾರದ ನಷ್ಟವಾಗಿದೆ. ಅವರ ಪತ್ನಿ ಮತ್ತು ಮಕ್ಕಳಿಗೆ ದೇವರು ದುಃಖ  ಸಹಿಸುವ ಶಕ್ತಿ ನೀಡಲಿ ಎಂದರು.

ಜೆಡಿಎಸ್ ಜಿಲ್ಲಾ ಕಾರ್ಯದರ್ಶಿರಾದ ವಸಂತ ಪೂಜಾರಿ, ಸುಶೀಲ್ ನೊರೊನ್ಹಾ ಅವರು ನನಗೆ ಹಲವು ವರ್ಷಗಳಿಂದ ಚಿರಪರಿಚಿತರಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಗೆ ಪ್ರತಿಯೊಂದು ವಿಧದಲ್ಲೂ ಸಂಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲರೊಡನೆ ಬೆರೆತು, ಎಲ್ಲರ ಪ್ರೀತಿಗೆ ಪಾತ್ರರಾದ ಅವರ ನಡೆನುಡಿ ನಮಗೆಲ್ಲ ಮಾರ್ಗದರ್ಶಿಯಾಗಿದೆ ಎಂದರು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಮುಲ್ಕಿ, ಪಕ್ಷಕ್ಕಾಗಿ ಅವರು ಮಾಡಿದ ತ್ಯಾಗಗಳನ್ನು ಸ್ಮರಿಸಿದರು.

ಜೆಡಿಎಸ್ ರಾಜ್ಯ ವಕ್ತಾರದ ಎಂ.ಬಿ ಸದಾಶಿವ ಮಾತನಾಡಿ"ನಾವೆಲ್ಲರು ಒಗ್ಗಟ್ಟು ಮತ್ತು ಒಮ್ಮತದಿಂದ ಜಿಲ್ಲಾ ಜೆಡಿಎಸ್ ಪಕ್ಷವನ್ನು ಬೆಳೆಸುವ ಕೆಲಸ ಮಾಡಿದರೆ ಅದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗುತ್ತದೆ ಎಂದರು".

ಮಂಗಳೂರು ವಿಧಾನಸಭಾ ಅಧ್ಯಕ್ಷರಾದ ಸುಮತಿ ಹೆಗ್ಡೆ ಸುಶೀಲ್ ನೊರೊನ್ಹಾ ಅವರ ಸರಳತೆ, ಮಾನವೀಯತೆ ಎಲ್ಲರಿಗೂ ಮಾದರಿ ಅಂದರು.

ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಫ್ರಾನ್ಸಿಸ್ ಎಂ.ಫೆರ್ನಾಂಡಿಸ್. ಧನ್ಯವಾದ ಸಲ್ಲಿಸಿ ಶ್ರದ್ಧಾಂಜಲಿ ಸಭೆಯನ್ನು ಮುಕ್ತಾಯಗೊಳಿಸಿದರು.

ಸಭೆಯಲ್ಲಿ,ಸುಶೀಲ್ ನೊರೊನ್ಹಾ ಅವರ ಪತ್ನಿ ಮತ್ತು ಮಕ್ಕಳು, ಮಾಜಿ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಂಞಿ , ಜೆಡಿಎಸ್ ರಾಜ್ಯ ಮೀನುಗಾರರ ಅಧ್ಯಕ್ಷ ರತ್ನಾಕರ್ ಸುವರ್ಣ,

MS ಷಾ ಜಮೀರ್, ಮಹಿಳಾ ಅಧ್ಯಕ್ಷರಾದ ರಮೀಜಾ ನಜೀರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ಅಜೀಜ್ ಕುದ್ರೋಳಿ. ಕೋಶಾಧಿಕಾರಿ ಗಂಗಾಧರ್ ಉಳ್ಳಾಲ್ ಯುವ ಜೆಡಿಎಸ್ ಅಧ್ಯಕ್ಷರಾದ ಅಕ್ಷಿತ್ ಸುವರ್ಣ,

ಹೈದರ್ ಪರ್ಥಿಪಡಿ, ಜಿಲ್ಲಾ ಕಾರ್ಯದರ್ಶಿ ಮುನೀರ್ ಮುಕ್ಕಛೇರಿ, ಹಿರಿಯ ನಾಯಕರಾದ ರಾಮ ಗಣೇಶ್,  ರಾಜ್ಯ  ವಕ್ತಾರರಾದ, ದಿನಕರ ಉಳ್ಳಾಲ್, ಇಬ್ರಾಹಿಂ ಗೋಳಿಕಟ್ಟೆ,ಅಲ್ತಾಫ್ ತುಂಬೆ, ಹಕೀಂ, ಸುದರ್ಶನ್ ಶೆಟ್ಟಿ,ತಮೀಮ್, ವಿನ್ಸೆಂಟ್ ಪಿರೇರಾ, ಇಜಾ ಬಜಾಲ್, ಚೂಡಾಮಣಿ,ವೀಣಾ ಜಯಂತ್ ಶೆಟ್ಟಿ, ಉಷಾ ಇನ್ನೀತರ ಪಕ್ಷದ ಮುಖಂಡರು ಭಾಗವಹಿಸಿದ್ದರು.