ಸ್ಪೆಯಿನ್‌ನ ರಾಫೆಲ್ ನಡಾಲ್ ಅವರು ಆಸ್ಟ್ರೇಲಿಯಾ ಓಪನ್‌ನಲ್ಲಿ ರಶಿಯಾದ ಡೇನಿಯಲ್ ಮೆದ್ವೆದೆವ್‌ರನ್ನು ಸೋಲಿಸಿ 21ನೇ ದಾಖಲೆಯ ಗ್ರಾನ್‌ಸ್ಲಾಮ್ ಜಯಿಸಿದರು.
ಟೆನ್ನಿಸ್ ದಿಗ್ಗಜರಾಜ ರೋಜರ್ ಫೆಡರರ್ ಮತ್ತು ನೊವಾಕ್ ಜಾಕೋವಿಕ್ 20 ಗ್ರಾನ್‌ಸ್ಲಾಮ್ ಗೆದ್ದಿರುವರು. ಫೈನಲ್ ಸುಲಭವಾಗಿರಲಿಲ್ಲ. 5 ಗಂಟೆ 24 ನಿಮಿಷಗಳ ಹೋರಾಟದ ಬಳಿಕವೇ ಮೆದ್ವೆದೆವ್ ಸೋಲಪ್ಪಿಕೊಂಡರು.
ಮಹಿಳಾ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ ಯುಎಸ್‌ಎಯ ಕಾಲಿನ್ಸ್ ಅವರನ್ನು ಸೋಲಿಸಿ ಚಾಂಪಿಯನ್ ಅದರು. ಆಸ್ಟ್ರೇಲಿಯಾದವರು 1978ರ ಬಳಿಕ ಅಂದರೆ 44 ವರುಷಗಳ ಬಳಿಕ ಈ ಪ್ರಶಸ್ತಿ ಗೆದ್ದರು. ಆಶ್ಲೆಯವರಿಗೆ ಇದು ಮೂರನೆಯ ಗ್ರಾನ್‌ಸ್ಲಾಮ್.
ಮಹಿಳಾ ಡಬಲ್ಸ್‌ನಲ್ಲಿ ಕ್ರೆಜ್ಸಿಕೋವಾ ಮತ್ತು ಕೆತೆರಿನಾ ಚಾಂಪಿಯನ್ ಆದರು.