ಸವಿತಾಳ ಧ್ವನಿಯಲ್ಲಿ ಭಕ್ತಿಗೀತೆಗಳನ್ನು ಕೇಳುವುದೆಂದರೆ ಅದೇನೋ ಒಂದು ಸೆಳೆತವಿರುತ್ತದೆ. ಈ ಬಹುಮುಖ ಪ್ರತಿಭೆಯನ್ನು ಕಂಡು ಸ್ವತಹ ಬಾಲಮುರಳಿ ಅವರೇ ಮೆಚ್ಚಿದ್ದರು. ಕಲಾ ಶಾರದೆ ಎಲ್ಲರನ್ನೂ ಕೈಬೀಸಿ ಕರೆಯುತ್ತಾಳೆ. ಆದರೆ ಅವರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡುತ್ತದೆ. ಪ್ರಾರಂಭದಲ್ಲಿ ಅನುಕರಣೆ ತದನಂತರ ಅನುಸರಣೆ ಮಾಡಿಕೊಂಡು ಬಂದಿದ್ದು ಸಾಧನೆಯಿಂದ ಪರಿಶ್ರಮವಿದ್ದರೆ ತಾನೇ ಸರ್ಟಿಫಿಕೇಟ್ ಸಿಗುತ್ತದೆ.
ಸಂಗೀತವಿಲ್ಲವೆಂದರೆ ಈ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ ಜಗತ್ತಿನಲ್ಲಿಡೆ ಎಲ್ಲರೂ ಸಂಗೀತವನ್ನು ಇಷ್ಟಪಡುವವರು ಮನುಷ್ಯನ ಮನಸ್ಸಿನ ಭಾವನೆಗಳಿಗೆ ರಂಗು ತುಂಬಲಿಕ್ಕೆ ಆರಾಧನಾ ಭಾಗದ ಸಂಗೀತ ಬೇಕೇ ಬೇಕು ಬದುಕನ್ನು ರಂಗಾಗಿಸಲು ಎಲ್ಲಾ ವರ್ಗ ವಯೋಮಿತಿಯವರನ್ನು ವಿಭಿನ್ನ ಮನಸ್ಸನ್ನು ಹಗುರ ಮಾಡಲು ಸಂಗೀತವನ್ನು ಆಲಿಸುತ್ತಾರೆ. ಸಂಗೀತವನ್ನು ಇಷ್ಟಪಡುತ್ತಾರೆ.
ಸವಾಲಿನ ಹೊಸ ಹೊಸ ಕೆಲಸಗಳನ್ನು ಮಾಡುತ್ತದೆ. ಸುಲಲಿತ ಸಂಗೀತ ಇರಬೇಕು ಏಕೆಂದರೆ ಅದು ಮುಗಿದ ಆ ನಂತರ ಸಿಗುವ ಸಂತೋಷವನ್ನು ಅನುಭವಿಸುವುದಕ್ಕಾಗಿ ಸಂಗೀತ ಮನುಷ್ಯರಿಗೆ ಮಾತ್ರವಲ್ಲ ಎಲ್ಲೆಲ್ಲೂ ಸಂಗೀತವೇ ವಿದ್ವಾನ್ ಅಮೈ ಶಿವರಾಮ್ ಭಟ್ ಮನೆಗೆ ಬಂದು ಸಂಗೀತ ಪಾಠ ಹೇಳಿ ಕೊಡುತ್ತಿದ್ದರು. ತದನಂತರ ಹೆಚ್ಚಿನ ವಿದ್ಯಾಭ್ಯಾಸವನ್ನು ಬಳ್ಳ ಪದವು ವಿದ್ವಾನ್ ಯೋಗಿಶ್ ಶರ್ಮಾ ಅವರಲ್ಲಿ ಕರ್ನಾಟಕ ಸಂಗೀತವನ್ನು ಶಾಸ್ತ್ರ ಬದ್ಧವಾಗಿ ಕಲಿಯಲು ಆರಂಭಿಸಿದರು.
ತದನಂತರ ಸ್ವರ ಸಿಂಚನ ಕಲಾ ಕೇಂದ್ರವನ್ನು ವಿಟ್ಲದಲ್ಲಿ ತೆರೆದು ಕಳೆದ ಹತ್ತು ವರ್ಷಗಳಲ್ಲಿ ಸತತ ನೂರು ಫಲಿತಾಂಶ ಗಳಿಸಿದ್ದು. ವಿದ್ಯಾರ್ಥಿಗಳಿಗೆ ಗಾಯನ ತರಬೇತಿ ನೀಡಿರುವುದು ಅಲ್ಲದೆ ಗಾಯನ ತಂಡವನ್ನು ಕಟ್ಟಿಕೊಂಡು ನಾಡಿನಾದ್ಯಂತ ವೈವಿಧ್ಯಮಯ ಕಾರ್ಯಕ್ರಮ ನೀಡಿದ್ದು ಮನೆ ಮಾತಾಗಿದೆ.ಶಾಸ್ತ್ರೀಯ ,ಸುಗಮ,ಭಕ್ತಿ ,ಭಾವ,ಭಜನೆ ಹಾಗೂ ಭಾರತೀಯ ಕಲಾ ಪ್ರಕರಣಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 2005ರಲ್ಲಿ ಸ್ಥಾಪನೆಗೊಂಡ ಗಾಯಕ ಸಂಗೀತ ಗುರು ಸವಿತಾ ಅವರ ಕನಸು ಕನಸಿನ ಕೂಸು ಸ್ವರ ಸಿಂಚನ ಸಂಗೀತ ಕಲಾ ಶಾಲೆ ಸಾಧಿಸಬೇಕೆಂಬ ಛಲ ಇದ್ದರೆ ಸಾಧನೆ ಮಾಡಬಹುದು.
ಬೆಟ್ಟ ನಮ್ಮ ಮುಂದೆ ಎಂದೂ ತಲೆಬಾಗದು ಕಷ್ಟಪಟ್ಟು ಅದನ್ನು ಏರಿದ್ದೆಆದಲ್ಲಿ ಅದು ನಮ್ಮ ಕಾಲ ಕೆಳಗೆ ಇರುತ್ತದೆ. ಸ್ವoತಿಕೆ ಯಶಸ್ಸಿನ ಮೂಲ ಇನ್ನೊಬ್ಬರನ್ನು ನಕಲು ಮಾಡಲು ಹೋಗಿ ಸಮಯ ಸಾಮರ್ಥ್ಯ ವ್ಯರ್ಥ ಮಾಡದಿರಿ. ಸಂಗೀತವೇ ಅಮರ ಸಲ್ಲಾಪವೇ ಸಂಗೀತ ಎಂಬುದೊಂದು ಮನಸ್ಸಿಗೆ ಹಿತ ನೀಡುವ ಕಾರ್ಯಕ್ರಮ.
ಕನಸನ್ನು ಎಲ್ಲರೂ ಕಾಣುತ್ತಾರೆ ಕೆಲವರಷ್ಟೇ ಕನಸನ್ನು ನನಸು ಮಾಡಲು ಸತತ ಪರಿಶ್ರಮಪಟ್ಟು ಸಾರ್ಥಕತೆ ಮೆರೆಯುತ್ತಾರೆ.
ಕೆಲವರಿಗೆ ತಮ್ಮ ಬಗ್ಗೆ ಬೇರೆಯವರು ಬರೆಯಬೇಕು ಎಂಬ ತುಡಿತ ಇರುತ್ತದೆ ಇನ್ನು ಕೆಲವರಿಗೆ ಸಾಧನ ಶೃಂಗವನ್ನು ಏರಿದರೂ ಸಹ ಪ್ರಚಾರದಿಂದ ದೂರವೇ ಇರುತ್ತಾರೆ. ವಿಶೇಷ ಸಂದರ್ಭದಲ್ಲಿ ಕೆಲವು ಮಹನೀಯರ ಬಗ್ಗೆ ಬರೆಯಬೇಕಾದ ತೀವ್ರತರವಾದ ಭಾವ ನಮ್ಮಲ್ಲಿ ಉಂಟಾಗುತ್ತದೆ.ಈ ವಿರಳ ವರ್ಗದಲ್ಲಿ ನಾನು ಉಲ್ಲೇಖಿಸುವ ವ್ಯಕ್ತಿ ಒಬ್ಬರು ಕಂಡುಬರುತ್ತಾರೆ. ಅವರು ನಮ್ಮೆಲ್ಲರಂತೆ ಸರಳತೆಯನ್ನು ಮೈಗೂಡಿಸಿಕೊಂಡು ವಿಶಿಷ್ಟವಾಗಿ ಕಾಣಿಸಿಕೊಳ್ಳುವ ಸಂಗೀತ ಟೀಚರ್ ಸವಿತಾ ಕೋಡಂದೂರ್ ಇವರು ಗ್ರಾಮೀಣ ಪ್ರದೇಶದಲ್ಲಿದ್ದು ಮದುವೆಯಾಗಿ ಮಕ್ಕಳಾದ ನಂತರ ಹೆಚ್ಚಿನ ಸಂಗೀತ ಕಲಿತು ತಾನು ಸಾಧಕನಾಗಬೇಕೆಂದು ಹಠದಲ್ಲಿ ಕಲಿತು ಇಂದು ನೂರಾರು ಮಕ್ಕಳಿಗೆ ಸಂಗೀತ ಅಭ್ಯಾಸ ಮಾಡಿಸುವ ಅವರಲ್ಲಿರುವ ಪ್ರತಿಭೆಯನ್ನು ಹೊರ ತರುವ ಪ್ರಯತ್ನದಲ್ಲಿ ಸದಾ ಶಾಂತ ಭಾವ ಯಾರೊಂದಿಗೆ ಧ್ವನಿ ಎತ್ತರಿಸಿ ಮಾತನಾಡದ ಸ್ವಭಾವ ತನ್ನ ಕೆಲಸದ ಬಗ್ಗೆ ಅತೀವ ಕಾಳಜಿ ಹೀಗೆ ಇನ್ನು ಕೆಲವು ವಿಶಿಷ್ಟತೆಗಳನ್ನು ತನ್ನ ಲ್ಲಿ ಅಡಕ ಗೊಳಿಸಿ ನಗು ಮುಖದಲ್ಲಿ ವ್ಯವರಿಸುವ ನಾರಿಮಣಿ ಆಗಿದ್ದಾರೆ. ಅವರಿಗೆ ನಿಗದಿಪಡಿಸಿದ ಕೆಲಸದಲ್ಲಿ ಇಂತಹ ವಿಶೇಷಗಳಿಗೆ ಅರ್ಹವಾಗಿ ಸಲ್ಲುವ ವ್ಯಕ್ತಿ ಬೇರೆ ಯಾರು ಇಲ್ಲ ಸವಿತಾ ಕೋದಂಡೂರು ವೃತ್ತಿ ಪ್ರವೃತ್ತಿಗಳ ಸಮನ್ವಯ ಸಾಧಕಿ.
ವಿಭಿನ್ನ ಪ್ರಯೋಗ ಮಾಡುವ ಆಸೆಗೆ ಇನ್ನಷ್ಟು ಪುಳಕಿತರಾಗುವ ಅಮೃತಗಳಿಗೆ ಒಂದು ಇತ್ತೀಚಿಗಷ್ಟೇ ಅವರಿಗೆ ಒದಗಿ ಬಂತು ತನ್ನ ಸ್ವರ ಸಿಂಚನ ಸಂಗೀತ ಶಾಲೆ ತನ್ನ ವಿದ್ಯಾರ್ಥಿಗಳು ಎಂಬ ಅಂಶವನ್ನು ಬಿಟ್ಟು ಬೇರೆಲ್ಲ ನಗಣ್ಯ ಎಂಬಷ್ಟರ ಮಟ್ಟಿಗೆ ವ್ಯಕ್ತವಾಗುವ ಇವರು ಈ ವರ್ಷ ವಾರ್ಷಿಕೋತ್ಸವಕ್ಕೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಯೂನಿಫಾರ್ಮ್ ಓಲೆ ,ಬೆಂಡೋಲೆ ಎಲ್ಲಾ ತರಿಸಿ ಅಲಂಕಾರ ನೀಡಿ ತನ್ನ ಚಾಪು ನೀಡಿದ್ದಾರೆ ಬೀರಿದ್ದಾರೆ. ತನ್ನ ಕ್ರಿಯಾಶೀಲ ಬದುಕು ಸಂಪನ್ಮೂಲ ವ್ಯಕ್ತಿಯಾಗಿ ಹಲವು ಸಂಗೀತ ಕಾರ್ಯಗಾರ ತರಬೇತಿಗೆ ಸಂಗೀತ ಪರೀಕ್ಷೆಯ ಮೌಲ್ಯಮಾಪಕರಾಗಿ ವಿವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡಿದ್ದಾರೆ ಸರಕಾರಿ ಶಾಲಾ ಮಕ್ಕಳಿಗೆ ಸಂಗೀತ ಪಾಠ ನೀಡಿದ್ದಾರೆ ಕೃಷಿ ಕಾರ್ಯದ ಜೊತೆ ಗೃಹಿಣಿಯಾಗಿ ಪತಿ ನಿವೃತ್ತ ಸುಪ್ರಜೀತ್ ಐಟಿಐ ವಿಟ್ಲ ಕಾಲೇಜಿನ ಪ್ರಾಚಾರ್ಯ ರಘುರಾಮ ಶಾಸ್ತ್ರಿ ಕೊಡಂದೂರು ಮಗ ಸಚಿನ್ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದು ಮಗಳು ಸಿಂಚನ ಲಕ್ಷ್ಮಿ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಮಗಳೊಂದಿಗೆ ವಾಸವಾಗಿದ್ದಾರೆ.
ಇವರು ಬಾಲ್ಯದಿಂದಲೇ ಮನೆಯಲ್ಲೇ ಸಂಗೀತ ಪಾಠದಿಂದ ಆಸಕ್ತಿ ಹೊಂದಿದ್ದು ಪುತ್ತೂರು ತಾಲೂಕು ಕಬಕ ಗ್ರಾಮದ ಪೊಳ್ಯ ನೂಜಿಯಲ್ಲಿ ವೇಮು ಕೇಶವ ಭಟ್ ಮತ್ತು ದೇವಕಿ ದಂಪತಿಯರ ಐವರು ಮಕ್ಕಳಲ್ಲಿ ಎರಡು ಗಂಡು ಮೂರು ಹೆಣ್ಣು ಮಕ್ಕಳಲ್ಲಿ ಎರಡನೆಯವಳಾಗಿ ಇವರು ಪ್ರಾಥಮಿಕ ಪ್ರೌಢಶಾಲೆ, ಕಬಕ ಶಾಲೆಯಲ್ಲೂ ಪಿಯುಸಿಯನ್ನು ವಿವೇಕಾನಂದ ಕಾಲೇಜು ವಿವೇಕಾನಂದರಲ್ಲಿ ಪಡೆದಿದ್ದಾರೆ. ನಂತರದ ದಿನಗಳಲ್ಲಿ ಹಲವು ವಿದ್ವಾನ್ ಗಳ ಬಳಿ ಸಂಗೀತ ಅಭ್ಯಾಸ ಮಾಡಿದ ಸವಿತಾ ಅವರು ಶಿಷ್ಯ ವೃಂದವನ್ನು ಹೊಂದಿದ್ದಾರೆ ಈಗಾಗಲೇ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿದೆ.
ಗರಿಮೆ- ಹಿರಿಮೆ
ಇವರಿಗೆ ಪೆರ್ನಾಜೆ ಪ್ರಶಸ್ತಿ , ಗಡಿನಾಡ ಧ್ವನಿ, ಕರಾವಳಿ ರತ್ನ ಸೌರಭ ರತ್ನ ರಾಜ್ಯ ಪ್ರಶಸ್ತಿ ಬಿರುದಂಕಿತ ಪ್ರಶಸ್ತಿ ಸನ್ಮಾನಗಳು ಪುರಸ್ಕಾರಗಳಿಗೂ ಭಾಜನರಾದ ಸವಿ ದೊರಕಿದೆ. ಸವಿತಾ, ಕ್ರಿಯಾಶೀಲ ಬದುಕನ್ನು ಹಲವು ಸನ್ಮಾನ ಪುರಸ್ಕಾರಗಳು ಅರಸಿ ಬಂದು ಧನ್ಯವಾಗಿಸಿವೆ.
"ಸ್ವರ ಸಿಂಚನಕ್ಕೆ" ನೀರ್ ಎರೆದು ಬೆಳೆಸಿದ್ದು, ಬೆನ್ನೆಲುಬಾಗಿ ನಿಂತರು ರಾಗಕ್ಕೆ ಸ್ವರವಾಗಿ ಸ್ವರ ಸ್ವರಕೆ ಪದವಾಗಿ ಪದಗಳಿಗೆ ಸ್ಪೂರ್ತಿಯಾಗಿ ಪ್ರೋತ್ಸಾಹ ನೀಡಿದವರು ಕುಮಾರ್ ಪೆರ್ನಾಜೆ ಮತ್ತು ಮನೆಯವರು ಗ್ರಾಮೀಣ ಕಲಾ ಪ್ರತಿಭೆಗಳನ್ನು ಒಂದುಗೂಡಿಸಿ ಸ್ವರಸಿಂಚನ ಕಲಾತಂಡದಿಂದ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಯ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.
ಸಂಗೀತ ಪ್ರಸಾರ ಮಾಡುವುದು ಮತ್ತು ಹೊಸ ಹೊಸ ಸಂಶೋಧನೆ ಇವರ ಹವ್ಯಾಸವಾಗಿದ್ದು ವೈವಿದ್ಯಮಯ ಕಾರ್ಯಕ್ರಮಗಳಾದ ಶಾಸ್ತ್ರೀಯ ಸಂಗೀತ ,ದ್ವಂದ್ವ ಗಾಯನ ಗಾನವೈಭವ ಸಪ್ತಮಾತ್ತ್ರಿಕೆಯರ ಗೀತ ಗಾಯನ ಸೆಕ್ಸೋಫನ್ ಜೊತೆ ಗಾನ ವೈಭವ ನವಮಾತೆಯರ ಗೀತ ಗಾಯನ, ಜೊತೆ ಮಿಮಿಕ್ರಿ ನೃತ್ಯ ವೈಭವ ನಗೆ ಹಬ್ಬ ಇದರ ಜೊತೆ ಜನಪದ ಭಕ್ತಿ ಭಾವ ,ಭಜನ್ ಗೀತೆಗಳನ್ನು ಅಲ್ಲದೆ ಸ್ಥಳೀಯರಿಂದಲೇ ವೇದಿಕೆಯಲ್ಲಿ ಹಾಡಿಸಿ ಸಹೃದಯ ಶೋತ್ರುಗಳನ್ನು ಬೆಳೆಸುವ ಕಾರ್ಯಕ್ರಮವನ್ನು ಮಾಡುತ್ತಿದೆ.ತಾನು ಬೆಳೆಯೋ ಜೊತೆ ಇತರರನ್ನು ಬೆಳೆಸುತ್ತಿರುವ ವಿಶೇಷ ಕಲಾತಂಡ ಇದಾಗಿದೆ.
ತಾಳಮೇಳವೆ ಮೈ ನವಿರೇಳಿಸುತ್ತದೆ ವಿಶಿಷ್ಟ ಪರಿಕಲ್ಪನೆಯಲ್ಲಿ ಸತತ ಐದು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಪ್ರಗತಿಪ ರೈತರ ಸತೀಶ್ ರೈ ಕರ್ನೂರ್ ಪ್ರಾಯೋಜಕತ್ವದಲ್ಲಿ ಈಶ್ವರ ಮಂಗಳ ಜಾತ್ರೆಯಲ್ಲಿ ವೈವಿಧ್ಯಮಯ ಗಾನ ವೈಭವ ನಗೆ ಹಬ್ಬ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಮತ್ತು ಎಲ್ಲರ ಮೆಚ್ಚುಗೆ ಗಳಿಸಿತು ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರು ಷಷ್ಟಿ ಮಹೋತ್ಸವದಲ್ಲಿ ಕೋಟೆ ದೇವಸ್ಥಾನ,ಐವರ್ ನಾಡು ದೇವಸ್ಥಾನ ಕಾವು,ಆಡೋರು ಕನಕ ಮಜಲು, ಜಾಲ್ಸೂರು ಹೀಗೆ ಎಲ್ಲೆಡೆ ಕಲಾತಂಡ ಪ್ರಸರಿಸಿದೆ. ಅದೇ ಪೆರ್ನಾಜೆಯವರ ವಿಶೇಷವಾಗಿದೆ.
ಮಂಚಿ ಮೋoತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ ಭಜನಾ ಗಾನ ವೈಭವ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯಕ್ ಕುಳಿತು ಆಲಿಸಿದ್ದು ಎಲ್ಲರ ಮೆಚ್ಚುಗೆಗಳಿಸಿತು. ಸವಿತಾ ಕೋಡಂದೂರು ಇವರಿಗೆ ಸಂಗೀತದಲ್ಲಿ ಅಪಾರ ಆಸಕ್ತಿ ಸಂಗೀತಕೆ ಶರಣಾಗಿದ್ದರೆ ಎಂದರು ತಪ್ಪಿಲ್ಲ ತನ್ನದೇ ಆದ ಪ್ರತಿಭೆ ಸಾಧನೆಯಾ ಛಾಪು ಮೂಡಿಸಿದ್ದಾರೆ.ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚುವ ಕಲಾಸಾದಕಿ ಆಗಲೆಂದು ಹಾರೈಸೋಣ.
ಚಿತ್ರ ಬರಹ:-
ಸೌಮ್ಯ ಕುಮಾರ್ ಪೆರ್ನಾಜೆ ಪುತ್ತೂರು