ವಿಶ್ವದ ಅತ್ಯಂತ ಪ್ರಾಚೀನ ಭಾಷೆ ಗಳಲ್ಲಿ ಕನ್ನಡವೂ ಒಂದು. ವಿಶ್ವದ ನಾನಾ ಪ್ರದೇಶಗಳಲ್ಲಿ ಸಿಕ್ಕ ಅಚ್ಚ ಕನ್ನಡ ಶಾಸನಗಳು ಕನ್ನಡದ ಪ್ರಾಚೀನತೆಯನ್ನು ಸಾಬೀತು ಪಡಿಸಿದೆ. ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸದೆ. ಕನ್ನಡವು ಕರ್ನಾಟಕದ ಬಹುತೇಕ ಜನರಿಗೆ ಮಾತೃ ಭಾಷೆ ಯಾಗಿದೆ. ನೆರೆಯ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ದಿಯುದಾಮನ್ ಗಳಲ್ಲಿ ಸಹ ಕನ್ನಡವನ್ನು ಮಾತೃ ಭಾಷೆ ಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ.ದ್ರಾವಿಡ ಭಾಷೆ ಗಳಲ್ಲಿ ಪ್ರಾಮುಖ್ಯತೆವುಳ್ಳ ಕನ್ನಡ ಭಾಷೆ ಯನ್ನುಅದರ ವಿವಿಧ ರೂಪಗಳಲ್ಲಿ ಸುಮಾರು 45 ದಶಲಕ್ಷ ಜನರು ಆಡುನುಡಿಗಾಗಿ ಬಳಸುತ್ತಿದ್ದಾರೆ. ಕನ್ನಡವೂ ಕರ್ನಾಟಕ ರಾಜ್ಯದಆಡಳಿತ ಭಾಷೆ ಎಂದರೆ ತಪ್ಪಾಗಲಾರದೇನೋ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತಾಡುವ ಭಾಷೆ ಎಂಬ ನೆಲೆಯಲ್ಲಿ 21ನೇ ಸ್ಥಾನ ಕನ್ನಡಕ್ಕಿದೆ. 2011ರ ಜನಗಣತಿಯ ಪ್ರಕಾರಜಗತ್ತಿನಲ್ಲಿ 6.4 ಕೋಟಿ ಜನರು ಕನ್ನಡ ಮಾತನಾಡುತ್ತಾರೆ. ಇವರಲ್ಲಿ 5.5 ಕೋಟಿ ಜನರ ಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆ ಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರಾರು 500 ವರ್ಷ ಚರಿತ್ರೆಯಿದೆ. ಕ್ರಿ.ಶ 6ನೇ ಶತಮಾನದ ಪಚ್ಚಿಮ ಗಂಗಾ ಸಾಮ್ರಾಜ್ಯದಕಾಲದಲ್ಲಿ ಮತ್ತು 9ನೇ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳೆಗನ್ನಡ ಸಾಹಿತ್ಯಅತ್ಯಂತ ಹೆಚ್ಚಿನ ರಾಜ ಆಶ್ರಯ ಪಡೆಯಿತು. ಹಾಗೆಯೇ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ವಿನೋಬಾ ಭಾಷೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಹೊಗಳುತ್ತಾರೆ. ಕನ್ನಡ ಅಕ್ಷರಮಾಲೆಯಲ್ಲಿ 49 ಅಕ್ಷರಗಳಿದ್ದು ಇದುಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿಸುಮಾರು ಎಲ್ಲ ಭಾರತೀಯ ಭಾಷೆಗಳು ಬರುತ್ತವೆ.
ತೆಲುಗು ಲಿಪಿಗೆ ಕನ್ನಡ ಲಿಪಿಯೊಂದಿಗೆ ನಿಕಟವಾದ ಹೋಲಿಕೆಯಿದೆ ಮತ್ತು ಈ ಎರಡು ಲಿಪಿಗಳ ಮೂಲ ಒಂದೇ ಆಗಿದೆ. ಕನ್ನಡ ಮತ್ತು ತೆಲುಗು ಲಿಪಿಗಳ ಎರಡು ಕದಂಬ ಲಿಪಿಯಿಂದ ರೂಪಗೊಂಡಿದೆ. ಕನ್ನಡ ಲಿಪಿ ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಮಾನವರು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರ ಲಿಪಿಯಿಂದ ಹಿಡಿದು ಇಂದಿನ ಮುದ್ರಣ ಮತ್ತು ಗಣಕ ಯಂತ್ರ ಲಿಪಿವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷೆ ಲಿಪಿಗಳಿಗೂ ಅಶೋಕನ ಶಾಸನಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಬ್ರಾಹ್ಮೀಲಿಪಿಯೇ ಮೂಲ. ಕನ್ನಡದ ಅಕ್ಷರ ಬ್ರಾಹ್ಮಿಲಿಪಿಯಿಂದ ರೂಪುಗೊಂಡು ಬಗೆಯನ್ನು ವಿಸ್ತೃತ ಅಧ್ಯಯನಗಳು ನಡೆದವೆ. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇಂಥ ಅಧ್ಯಯನಗಳ ಸಹಾಯದೊಂದಿಗೆ ಅಕ್ಷರಗಳು ಮಾರ್ಪಟ್ಟ ಬಗೆಗಳನ್ನು ಕಂಡರಿಯಲು ಸಾಧ್ಯವಿದೆ. ಮುದ್ರಣದ ಆರಂಭದೊಂದಿಗೆ ಕನ್ನಡ ಲಿಪಿಗೆ ಈಗಿನ ರೂಪ ನೆಲೆ ನಿಂತಿರುವುದು ಒಂದು ಅಪರೂಪದ ಸಂಗತಿಯಾಗಿದೆ.ಕನ್ನಡ ಅಕ್ಷರಗಳನ್ನು ಗಣಕ ಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ವಿಧಾನಗಳಿವೆ. ಅವುಗಳು ಬರಹ ಮತ್ತು ನುಡಿಕರ್ನಾಟಕ ಸರಕಾರದ ಲಿಪ್ಯಂತರ ವಿಧಾನ ನುಡಿಯಾಗಿದೆ.
20ನೇ ಶತಮಾನದ ಕನ್ನಡ ಸಾಹಿತ್ಯ ಹಲ ಬಗೆಯ ಚಳುವಳಿಗಳಿಂದ ಪ್ರಭಾವಗೊಂಡಿದೆ. ಇವುಗಳಲ್ಲಿ ಮುಖ್ಯವಾದದ್ದು ನವೋದಯ, ನವ್ಯ, ನವ್ಯೋತ್ತರ, ದಲಿತ, ಬಂಡಾಯ, ಎಂಬುವುಗಳಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳನ್ನು ತಲುಪುತ್ತಲಿದೆ. ಅಷ್ಟೇ ಅಲ್ಲದೆ ಕನ್ನಡದಲ್ಲಿ ಪ್ರಸಿದ್ಧರೂ ಶ್ರೇಷ್ಠರೂ ಕುವೆಂಪು, ದಾ.ರಾ ಬೇಂದ್ರೆ ಮುಂತಾದ ಕವಿಗಳು ಸಾಹಿತಿಗಳೂ ಬಾಲಿ ಬದುಕಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಬಾರಿ ಜ್ಞಾನಪೀಠ ಪ್ರಶಸ್ತಿ ದೊರಕತಿದೆ. ಕುವೆಂಪು, ದಾ.ರಾ ಬೇಂದ್ರೆ, ಶಿವರಾಮ ಕಾರಂತ,ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ ಕೃ ಗೋಕಾಕ್, ಯು. ಆರ್ ಅನಂತಮೂರ್ತಿ, ಚಂದ್ರಶೇಖರ ಕಂಬಾರ ಈ ಎಂಟು ಜನ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೃಷಿ ಮಾಡಿ ಕನ್ನಡಕ್ಕೆ ಗರಿಷ್ಠ ಜಾನಪೀಠ ಪ್ರಶಸ್ತಿ ತಂದುಕೊಟ್ಟವರು. ಕಳೆದ ಶತಮಾನದಲ್ಲಿ ಅಂದರೆ 20ನೇ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆ ಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ ಅಂತರ್ಜಾಲದಲ್ಲಿ ಕನ್ನಡ ಭಾಷೆ ಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆದುಕೊಂಡಿದೆ. ಹಾಗಾಗಿ ಸ್ವಂತ ಲಿಪಿ, ಸ್ವಂತ ಸಂಖ್ಯೆಯೇ, ಸ್ವಂತ ವ್ಯಾಕರಣ, ದೊಡ್ಡ ವರ್ಣಮಾಲೆ, ಉಚ್ಚರಿಸುವುದನ್ನೇ ಬರೆಯುವ ಸಾವಿರಾರು ವರ್ಷಗಳ ಇತಿಹಾಸವಿರುವ ಭೂಮಂಡಲದ ಏಕೈಕ ಭಾಷೆ ಕನ್ನಡವೇ ಸತ್ಯ.
ಜೈ ಕರ್ನಾಟಕ!
Article By
ವಿಂದ್ಯಶ್ರೀ ಎನ್
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಮಂಗಳೂರು