ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಚಿಗುರು ಆಲ್ ಇಂಡಿಯಾ ವಧು ವರರ ವೇದಿಕೆ ವತಿಯಿಂದ ಆಗಸ್ಟ್ 24 ರಂದು ಮೂಡುಬಿದಿರೆ ಆಳ್ವಾಸ್ ವಿದ್ಯಾಗಿರಿಯಲ್ಲಿ ರಾಜ್ಯಮಟ್ಟದ ವಧು-ವರರ ಪರಿಚಯ ಸಂಪರ್ಕ ಹಾಗೂ ಸಮ್ಮೇಳನ ನಡೆಯಲಿದೆ. ವೇದಿಕೆಯ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಮದುವೆಗಳನ್ನು ಈಗಾಗಲೇ ಮುಗಿಸಿದರು ಕೂಡ ಈತನಕ ಸಮ್ಮೇಳನವನ್ನು ನಡೆಸಿರುವುದಿಲ್ಲ. ಇದೀಗ ಮೊಟ್ಟಮೊದಲ ಬಾರಿಗೆ ಜೈನ ವಧು ವರರ ರ ಸಮ್ಮೇಳನದ ಮೂಲಕ ಅಧಿಕೃತವಾಗಿ ಪ್ರತಿಯೊಬ್ಬರಿಗೂ ಸಂಖ್ಯಾ ಫೈಲ್ ಗಳನ್ನು ನೀಡಿ ಕಾನೂನು ಬದ್ಧ ರೀತಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ನಿಶ್ಚಿತ ಶುಲ್ಕವನ್ನು ಭರಿಸಿ ಎಲ್ಲಾ ದಾಖಲೆಗಳನ್ನು ನೀಡುವ ಜೈನ ವಧು ವರರ ಮಾಹಿತಿಗಳನ್ನು ವಿನಿಮಯಗೊಳಿಸಿ ಸಮರ್ಪಕ ಜೋಡಿಗಳಿಗೆ ಮದುವೆಯ ಅವಕಾಶಗಳನ್ನು ಮಾಡಿಕೊಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕೆಲ್ಲಪುತ್ತಿಗೆ ಸುಭಾಶ್ಚಂದ್ರ ಚೌಟ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಚಾಲಕ ಸಂಪತ್ ಜೈನ್, ಗೌರವ ಸಲಹೆಗಾರರಾದ ಅಳಿಯೂರು ಆದಿರಾಜ ಜೈನ್, ಸನತ್ ಕುಮಾರ್ ಜೈನ್ ಹಾಜರಿದ್ದರು.