Name: Raymond Dcunha

DOB: 22-03-1964

Blood Group: o+ve

Qualification: BA Law; MA Mass Communication and Journalism; PG Theology

Address: Pingara, Kodialbail Church Building 2nd Floor, Kodialbail Post Mangaluru - 575003

Contact: 9845419482

Email: pingaara@gmail.com

ಹಿರಿಯ ಪತ್ರಕರ್ತರು,

ಬಹುಭಾಷಾ ಸಾಹಿತಿ, ಸಮಾಜಸೇವಕರು

ರೇಮಂಡ್ ಡಿಕೂನಾ ತಾಕೊಡೆ. 

BA Law; MA Mass Communication and Journalism; PG Theology.


1985ರಿಂದ ಸಾಹಿತಿ, ಪತ್ರಕರ್ತರು. 39 ವರುಷಗಳಿಂದ ಕನ್ನಡ, ಕೊಂಕಣಿ, ತುಳು, ಇಂಗ್ಲಿಷ್ ಬಾಷೆಗಳಲ್ಲಿ ಸಾಹಿತ್ಯ ರಚನೆ.

ಈಗ ಪೂರ್ಣಕಾಲಿಕ ಪತ್ರಕರ್ತರು, ಸಾಹಿತಿಗಳು. 2004ರಿಂದ ಸಂಪಾದಕರು: ಪಿಂಗಾರ.ಕೊಮ್, ಪಿಂಗಾರ ಯುಟ್ಯುಬ್ ಚಾನಲ್, ಪಿಂಗಾರ ಟ್ವೀಟರ್ ನೀವ್ಸ್. ಪಿಂಗಾರ ಕನ್ನಡ ಸುದ್ದಿ ಪತ್ರಿಕೆ.

ವಿ4 ಟಿವಿಯಲ್ಲಿ ಕಳೆದ 250 ವಾರಗಳು ಮತು ಈಗಲೂ ನಿರಂತರ ಲೈವ್ ವಾರದ ಕಾರ್ಯಕ್ರಮದ ನಿರೂಪಕರು. 750ಕ್ಕೂ ಅಧಿಕ ಜನರನ್ನು ಪರಿಚಯ ಮಾಡಿದ ಕೀರ್ತಿ.

ಕೋವಿಡ್ ಸಮಯ ಲೋಕ್ ಡೌನÀಲ್ಲಿ ದಣಿವರಿಯದೆ 2020 ಮಾರ್ಚ್ 22ರಿಂದ ಮರು ಆರಂಭವರೆಗೆ ಮತ್ತು 28 ಏಪ್ರಿಲ್ 2021 ರಿಂದ ಮರು ಆರಂಭವರೆಗೆ ನಿರಂತರ ವಿವಿದ ಸೇವೆ, ಸಮಸ್ಯೆ, ಸಹಾಯಗಳ ಬಗ್ಗೆ ಯೂಟ್ಯೂಬ್, ಟ್ವೀಟರ್, ಪೇಸ್ಬುಕ್, ವೆಬ್‍ಸೈಟ್ ನಲ್ಲಿ ಜಾಗೃತಿ ಮೂಡಿಸಿದರು.

ಲೊಕ್ ಡೌನ್ ಸಮಯದಲ್ಲಿ ಬಡವರ ಆಹಾರವಾದ ಶುದ್ಧ ನೀರು,ಐದು ರೂಪಾಯಿ ಬಿಸ್ಕತ್ ಪ್ಯಾಕೆಟ್ ಕಾರಲ್ಲಿ ಇಟ್ಟು ಬಾಯಾರಿಕೆ ಮತ್ತು ಆಹಾರದ  ತಾತ್ಕಾಲಿಕ ಶಮನ ಮಾಡಿ ಸಾವಿರಕ್ಕಿಂತ ಅಧಿಕ ಜನರಿಗೆ ನೆರವು ನೀಡಿದ್ದಾರೆ.

ಹುಟ್ಟೂರು: 1964 ಮಾರ್ಚ್ 22ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಬಳಿಯ ತಾಕೋಡೆ ಎನ್ನುವ ಊರಿನಲ್ಲಿ ಕೃಷಿಕ ಕುಟುಂಬದಲ್ಲಿ ಹುಟ್ಟಿ, ಪ್ರಾಥಮಿಕ ಶಿಕ್ಷಣ ಕನ್ನಡ ಮಾದ್ಯಮದಲ್ಲಿ  ಆಯಿತು. ಮೂಡುಬಿದಿರೆಯ ಜೈನ ಕಾಲೇಜಿನಲ್ಲಿ ಪ್ರೌಡ ಹಾಗೂ ಪಿಯುಸಿ ಮುಗಿಸಿ ಮಂಗಳೂರಿನಲ್ಲಿ ಬಿಎ ಎಲ್ ಎಲ್ ಬಿ  ಹಾಗೂ ಪತ್ರಿಕೋದ್ಯಮ ಉನ್ನತ ವ್ಯಾಸಂಗವನ್ನು ಮೈಸೂರು ಮಹಾವಿದ್ಯಾಲಯದಿದಂದ ಪೂರ್ಣಗೊಳಿಸಿದರು.

ಸಾಹಿತ್ಯ ಕೃಷಿ: 14 ಪುಸ್ತಕಗಳು ಪ್ರಕಟ ಆಗಿವೆ.   

3 ನಾಟಕಗಳು ಬರೆದಿದ್ದಾರೆ- 1)ಸ್ಪೆಷಲ್ ರೆಡಿಯೊ 2)ಅಂರ್ದಲ್ಲೊ ಪಾಸ್ 3) ಮಜಿ ಬಾಂಯ್.

ಕನ್ನಡ: 1)ಪತಿ ಪತ್ನಿ ಸುತಾಲಯ(ಲೇಖನಗಳು) 2) ನನ್ನವಳ ಕವಳ(ಕವನ ಸಂಕಲನ)

ಕೊಂಕಣಿ: ಮೂರು ಕಾದಂಬರಿಗಳು : 1) ಬಲಿ, 2)ಅಟೆವಿಟೆ, 3)ಶಾಲಿ ಮೊಗಾಚಾ 4) ಮಾಡ್ತಿರ್ 5) ಪ್ರವಾಸ್ ಕಥನ್- ಜೀವನ್ ಏಕ್ ಭಂವ್ಡಿ, 6) ಮಾದ್ಯಮ್ ಕಾಲ್ ಅನಿ ಆಜ್, 7)ಪತ್ರ್ ಕರ್ತ ಸಾಮಾಜೆಚೊ ಆರ್ಸೊ 8)ಕವಿತಾ ಪುಂಜೊ-ಮೊಂವ್, 9)ಕನ್ನಡ್ ಕವಿತಹ ಪುಂಜೊ-ನನ್ನವಳ ಕವಳ 10) ಪತಿ ಪತ್ನಿ ಸುತಾಲಯ 11) ಸಕಲಾಭರಣಗಳು, 12)ಆಭರಣಗಳು 13) ಚುಟುಕಿನ 55 ಕವಿಗಳು 14)ಮಾಡ್ತಿರ್ ಕೊಂಕಣಿ ಧಾರವಾಹಿ ಪ್ರಕಟಗೊಂಡಿವೆ.

500 ನ್ಯಾನೊ 50 ಶಬ್ದಗಳೊಳಗಿನ  ಹಾಗೂ ನೂರು ಸಣ್ಣ ಕಥೆಗಳ ಪ್ರಕಟ.

1000ಕ್ಕಿಂತ ಮೇಲೆ ಕವಿತೆ ರಚನೆ. ಸಾವಿರ ಚುಟುಕು ರಚನೆ ಪ್ರಕಟ. ಲೇಕನಗಳು ಬರೆದು ಪ್ರಕಟ.

ಆಕಾಶವಾಣಿ ಮಂಗಳೂರಿನಲ್ಲಿ ಕನ್ನಡ, ಕೊಂಕಣಿ, ತುಳು ಭಾಷೆಗಳಲ್ಲಿ ಕಾರ್ಯಕ್ರಮಗಳು.

ತುಳು: ಕವನಗಳು, ಚುಟುಕುಗಳು ರಚನೆ ಹಾಗೂ ಪ್ರಕಟ. ಅಖಿಲ ಭಾರತ ತುಳು ಒಕ್ಕೂಟದ ರಾಷ್ಟೀಯ ಕಾರ್ಯಕ್ರಮದಲ್ಲಿ ವಾಚ ಅವಕಾಶ.

ಇಂಗ್ಲಿóಷ್: ಕವಿತೆ, ಲೇಖನಗಳು ಬರೆದು ಪ್ರಕಟ.

ನಾಟಕ: ಸ್ಪೆಷಲ್ ರೇಡಿಯೋ ಸಣ್ಣ ನಾಟಕ. 15 ತುಳು, ಕೊಂಕಣಿ, ಕನ್ನಡ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ.

ಚಾರೊಳಿ ಕಿಂಗ್ ಎಂದು ಪ್ರಸಿದ್ಧ. ಪ್ರತಿದಿನ ಹೊಸ ಹೊಸ ಚಾರೊಳಿ ರಚನೆ.

ಪತ್ರಕರ್ತನಾಗಿ ಸೇವೆ: ಜನಬಿಂಬ ಎಂಬ ತಾಲೂಕು ಮಟ್ಟದ ಕಾರ್ಕಳದ ಪತ್ರಿಕೆಯಲ್ಲಿ ಬಿಡಿ ಸುದ್ದಿಗಾರರಾಗಿ ಆರಂಭಿಸಿ ನಂತರ ಜನವಾಹಿನಿ ದೈನಿದಲ್ಲಿ 6 ವರುಷ, ಆಂಗ್ಲ ಪೋರ್ಟಲ್ ದಾಯ್ಜ್ಜಿವಲ್ರ್ಡ ನಲ್ಲಿ 5 ವರುಷ ಕೆಲಸ ಮಾಡಿ ನಂತರ ಸ್ವಂತ ಪಿಂಗಾರ ಆಂಗ್ಲ, ಕನ್ನಡ ದ್ವಿಭಾಷಿ ಪೋರ್ಟಲ್ ಹಾಗೂ ಕನ್ನಡ ವಾರ ಪತ್ರಿಕೆ ಪಿಂಗಾರ ಪತ್ರಿಕೆ ಕಳೆದ 20 ವರುಷಗಳಿಂದ ನಡೆಸುತ್ತಿದ್ದಾರೆ.

ಚಾರಿಟಿ: ಕ್ಲೊತ್ ಬ್ಯಾಂಕ್ ಎಂಬ ಸಂಸ್ಥೆಯನ್ನು ಆರಂಭಿಸಿ ಹೊಸ ಬಟ್ಟೆಗಳನ್ನು ಸಂಗ್ರಹ ಮಾಡಿ ಕಳೆದ ಐದು ವರುಷಗಳಲ್ಲಿ  10 ಲಕ್ಷ ರೂಪಾಯಿಯ ಸಂಗ್ರಹ ಮಾಡಿ ಮಕ್ಳು, ಹಿರಿಯರು ಮದುಮಕ್ಕಳು ಹೀಗೆ ಮೂರು ಸಾವಿರದಷ್ಟು ಜನರಿಗೆ ಅವುಗಳ ದಾನ ಮಾಡಿದ್ದಾರೆ. ಈಗಲೂ  ಸಂಗ್ರಹ ಆಗುತ್ತಿದೆ. ದಾನ ನಡೆಯುತ್ತಿದೆ. ಪ್ರಚಾರ  ಇಲ್ಲ.

ಸಾಮಾಜಿಕ ಮುಖಂಡತ್ವ: ಮೂಡುಬಿದಿರೆ ಪ್ರೆಸ್ ಕ್ಲಬ್ ಸಂಸ್ಥಾಪಕ ಮತ್ತು 3ವರುಷ ಅದ್ಯಕ್ಷ.

ಜೆಸಿಐ ಮೂಡುಬಿದಿರೆ ಇದರ 1999-2000 ಅದ್ಯಕ್ಷ.

ಜೆಸಿಐ ತರಬೇತುದಾರ.

ಜೈನ್ ಜೂನಿಯರ್ ಕಾಲೆಜು ಮೂಡುಬಿದಿರೆ ಇದರ ವಿದ್ಯಾರ್ಥ ನಾಯ್ 2013-14

2017-2018 ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅದ್ಯಕ್ಷ

ಕೊಂಕಣಿ ನಾಟಕ ಸಭಾ ಇದರ ಸಾರ್ವಜನಿಕ ಸಂಪರ್ಕ ಆಧಿಕಾರಿಯಾಗಿ ಸೇವೆ.

ಎಂಸಿಸಿ ಬ್ಯಾಂಕ್ ಇದರ ಮಾಜಿ ಆಡಳಿತ ನಿರ್ಧೇಶಕ

ಮಂಗಳೂರು ಚುಟುಕು ಸಾಹಿತ್ಯ ಪರಿಷತ್ ಇದರ 2019-20ರ ಅದ್ಯಕ್ಷ.

ಅಖಿಲ ಭಾರತೀಯ ಚಾರೊಳಿ ಕೊಂಕಣಿ ಸಾಹಿತ್ಯ ಪರಿಷತ್ ಇದರ ಸಂಸ್ಥಾಪಕ ಅದ್ಯಕ್ಷ.

ಪ್ರಸ್ತುತ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಕಾರ್ಯದರ್ಶಿ (2021-2025)