ಡೆಮಾಕ್ರೆಟಿಕ್ ಪಕ್ಷದ ಮಿನ್ನೆಸೋಟ ಸದಸ್ಯೆ ಇಲ್ಹಾನ್ ಉಮರ್ ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ ಖಂಡಿಸಿ ನಿರ್ಣಯ ಮಂಡಿಸಿದ್ದಾರೆ.
ಡೆಮಾಕ್ರೆಟಿಕ್ ಪಕ್ಷದ ಹಲವು ಸದಸ್ಯರು ಇದನ್ನು ಬೆಂಬಲಿಸಿದ್ದರಿಂದ ಇದನ್ನು ಸ್ವೀಕರಿಸಲಾಯಿತು. ವಿದೇಶ ವ್ಯವಹಾರಗಳ ವಿಭಾಗಕ್ಕೆ ಸೂಕ್ತ ಕ್ರಮಕ್ಕಾಗಿ ಒಪ್ಪಿಸಲಾಯಿತು. ಮುಸ್ಲಿಂ, ಕ್ರಿಶ್ಚಿಯನ್, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ದಮನ ಭಾರತದ ಈಗಿನ ಸರಕಾರದಡಿ ಎಗ್ಗಿಲ್ಲದೆ ನಡೆದಿದೆ. ಮಾನವ ಹಕ್ಕುಗಳ ಉಲ್ಲಂಘನೆ ಅಧಿಕರಿಸಿದೆ ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.