ಮೂಡುಬಿದಿರೆ:- ಸ್ಥಳೀಯ ರೋಟರಿ ಸಿ.ಬಿ.ಎಸ್.ಇ. ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳಿಗೆ ಜನವರಿ 25 ರಂದು ಗ್ರಾಹಕ ಶಿಕ್ಷಣ ಮಾಹಿತಿ ನೀಡಲಾಯಿತು. ಬೆಂಗಳೂರು ಕ್ರಿಯೇಟ್ ಗ್ರಾಹಕ ಸಂಸ್ಥೆಯ ತರಬೇತುದಾರ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಅವರು ವಿದ್ಯಾರ್ಥಿಗಳಿಗೆ ಗ್ರಾಹಕ ಸಂರಕ್ಷಣಾ ಕಾಯ್ದೆ, ವಸ್ತುಗಳ ಗುಣಮಟ್ಟ, ಸೇವೆ, ಆಯ್ಕೆಯ ಹಕ್ಕು. ಕೊರತೆಯ ಸಂದರ್ಭದಲ್ಲಿ ಪರಿಹಾರದ ಉಪಾಯಗಳು, ಜಿಲ್ಲಾ, ರಾಜ್ಯ, ಕೇಂದ್ರ ಪರಿಹಾರ ಆಯೋಗದ ಕಾರ್ಯ ವಿಧಾನ ಇತ್ಯಾದಿಗಳ ಸಮಗ್ರ ಮಾಹಿತಿಯನ್ನು ನೀಡಿದರು. ಅಲ್ಲದೆ ಆರ್.ಟಿ.ಐ. 2005 ರ ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಿದರು.
ಶಾಲಾ ಪ್ರಾಂಶುಪಾಲೆ ರೂಪ ಸ್ವಾಗತಿಸಿದರು. ಶಿಕ್ಷಕಿ ಪ್ರಣವಿ ವಂದಿಸಿದರು.