ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:- ಸ್ಥಳೀಯ ರೋಟರಿ ಶಿಕ್ಷಣ ಸಂಸ್ಥೆಯ ವತಿಯಿಂದ ರೋಟೋ ಕನೆಕ್ಟ್ ಕಾರ್ಯಕ್ರಮ ಶಿರ್ತಾಡಿ ಗ್ರಾಮ ಪಂಚಾಯತ್ ಹಾಗೂ ಬನ್ನಡ್ಕದ ರಾಘವೇಂದ್ರ ಮಠದ ಹಾಲ್ ನಲ್ಲಿ ದಶಂಬರ 15 ರಂದು ನಡೆಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿಎಂ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿ ಡಾ.ಪ್ರಸನ್ನ ಕಾಕುಂಜೆ ಆರೋಗ್ಯದ ಸೂತ್ರಗಳನ್ನು ತಿಳಿಸಿದರು. ವಾಹನಗಳಂತೆ ದೇಹಕ್ಕೆ ಕೂಡಾ ಏನು, ಹೇಗೆ, ಎಷ್ಟು ತಿನ್ನಬೇಕು ಅಂತ ಅಗತ್ಯ ತಿಳಿದುಕೊಳ್ಳಿ ಎಂದು ಹಲವಾರು ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು.

ಅಂಚೆ ಇಲಾಖೆಯ ಸಂಪನ್ಮೂಲ ವ್ಯಕ್ತಿ , ಪುತ್ತೂರು ಮಾರುಕಟ್ಟೆ ವ್ಯವಸ್ಥಾಪಕ ಗುರು ಪ್ರಸಾದ್ ಕೆ ಎಸ್ ರವರು ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಅಂಚೆ ಇಲಾಖೆಯ ಮೂಲಕ ಜಾರಿಗೊಳ್ಳುತ್ತಿದೆ. ಆಧಾರ್, ಎಟಿಎಂ, ಜೀವ,  ಜನ ಸುರಕ್ಷಾ, ಜೀವನ ಪ್ರಮಾಣ ಪತ್ರ, ಸಮೂಹ ಅಪಘಾತ , ಆರೋಗ್ಯ ಇತ್ಯಾದಿ ವಿಮಾ ಯೋಜನೆಗಳ ಮಾಹಿತಿ ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು. ದೇಶಾದ್ಯಂತದ ಒಂದೂವರೆ ಲಕ್ಷ ಅಂಚೆ ಕಚೇರಿಯಲ್ಲಿ ಈ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.

ಸೈಬರ್ ಸೆಕ್ಯೂರಿಟಿ ತಂತ್ರಜ್ಙ ಚಿರಾಗ್ ಸುವರ್ಣ ಮಾಹಿತಿ ನೀಡಿದರು. ಸೈಬರ್ ಅಪರಾಧಕ್ಕೆ ವಯಸ್ಸಿನ ಮಿತಿ ಇಲ್ಲ. ಯಾರೂ ಯಾವಾಗ ಬೇಕಾದರೂ ಹ್ಯಾಕರ್ಸ್ ಹಣ, ಮಾಹಿತಿ ಕದಿಯ ಬಹುದು. ಆದುದರಿಂದ ಎಲ್ಲರೂ ಜಾಗರೂಕತೆಯಿಂದ ಇರಬೇಕು ಎಂದು ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಮಂಗಳೂರು ಸಬ್ ಇನ್ಸ್ಪೆಕ್ಟರ್ ಕುಂಜತ್ತಬೈಲ್ ಮೋಹನ್, ರೋಟರಿ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಸಾರ್ವಜನಿಕರ ಪರವಾಗಿ ಹರೀಶ್ ಆಚಾರ್ಯ ಉತ್ತಮ ವಿವರಕ್ಕೆ ಧನ್ಯವಾದ ಸಲ್ಲಿಸಿದರು. ಶಿಕ್ಷಕಿ ರಮ್ಯ ಅರುಣ್ ಕುಮಾರ್ ಸ್ವಾಗತಿಸಿ ವಂದಿಸಿದರು.