ಜರ್ಮನಿಯಲ್ಲಿ 40 ದೇಶಗಳ ಭದ್ರತಾ ಸಭೆಗೆ ಮೊದಲು ಉಕ್ರೇನಿಗೆ ಶಸ್ತ್ರಾಸ್ತ್ರ ಒದಗಿಸಿ ಮೂರನೆಯ ಮಹಾಯುದ್ಧ ಮೈಮೇಲೆ ಕಳೆದುಕೊಳ್ಳಬೇಡಿ ಎಂದು ರಶಿಯಾದ ವಿದೇಶಾಂಗ ಮಂತ್ರಿ ಸೆರ್ಗಿ ಲಾವ್ರೋವ್ ಹೇಳಿದರು.

ಅಮೆರಿಕವು ಕಳ್ಳ ಹಾದಿಯಲ್ಲಿ ಉಕ್ರೇನಿಗೆ ಶಸ್ತ್ರಾಸ್ತ್ರ ಪೂರೈಸುತ್ತಿದೆ ಮತ್ತು ರಶಿಯಾ‌ ಸೋಲುತ್ತದೆ ಎಂದು ಹೇಳುತ್ತಲಿದೆ. ಇದು ರಶಿಯಾಕ್ಕೆ ಅನಿವಾರ್ಯವಾಗಿ ಅಣ್ವಸ್ತ್ರ ಪ್ರಯೋಗಿಸುವ ಸ್ಥಿತಿ ತರಬಹುದು ಮತ್ತು ಮೂರನೆಯ ಮಹಾಯುದ್ಧಕ್ಕೆ ವೀಳ್ಯ ನೀಡಿದಂತಾಗುತ್ತದೆ ಎಂದು ಸೆರ್ಗಿಯವರು ಎಚ್ಚರಿಸಿದರು.