ಎಸ್‌ಸಿ/ಎಸ್‌ಟಿ ನಕಲಿ ಜಾತಿ ಪತ್ರಗಳ‌ ಮೂಲಕ ಕೆಲಸ ಗಿಟ್ಟಿಸಿಕೊಂಡಿದ್ದ 89 ಸರಕಾರಿ ನೌಕರರನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ ಮತ್ತು 1,097 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ. ರವೀಂದ್ರನಾಥ ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ಶೋಷಿತರ ಉನ್ನತಿಗೆ ಇರುವುದನ್ನು ಬಲಿತರು ಬಲಾತ್ಕಾರವಾಗಿ ಕಸಿದುಕೊಳ್ಳುವುದು ಸಂವಿಧಾನ ವಿರೋಧಿ ಎಂದು ರವೀಂದ್ರನಾಥ ತಿಳಿಸಿದರು.

ಅಕ್ರಮವಾಗಿ ನಕಲಿ ಜಾತಿ ನೀಡಿದ 111 ಜನ ತಹಶಿಲ್ದಾರರು, 108 ಮಂದಿ ಕಂದಾಯ ನಿರೀಕ್ಷಕರು ಮತ್ತು 107 ಗ್ರಾಮ ಲೆಕ್ಕಿಗರ‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದೂ ಅವರು ಹೇಳಿದರು.