ಮೂಡುಬಿದಿರೆ:- ಸಾವಿರ ಕಂಬ ಬಸದಿ ಲಕ್ಷ ದೀಪೋತ್ಸವ ಡಿಸೆಂಬರ್ 25 ಸಂಜೆ 6.00 ರಿಂದ ರಾತ್ರಿ  9.00 ರ ವರೆಗೆ ಇತಿಹಾಸ ಪ್ರಸಿದ್ದ ಮೂಡುಬಿದಿರೆ ಸಾವಿರ ಕಂಬ ಬಸದಿಯಲ್ಲಿ 108 ದಿವ್ಯ ಸಾಗರ್ ಮುನಿ ರಾಜರ ಪಾವನ ಸಾನ್ನಿಧ್ಯ ಹಾಗೂ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಪಾವನ ಉಪಸ್ಥಿತಿ ನೇತೃತ್ವದಲ್ಲಿ ಜರುಗಿತು.

ಮುನಿ ಮಹಾರಾಜರು ತಮ್ಮ ಪ್ರವಚನದಲ್ಲಿ ದೀಪ ಸುಜ್ಞಾನದ ಸಂಕೇತ, ಆತ್ಮ ಚೈತನ್ಯದ ಸಂಕೇತ, ಸರ್ವರೂ ಆತ್ಮ ಜಾಗೃತಿಯಿಂದ ಧರ್ಮ ಜಾಗೃತಿ ಮಾಡಿ ನಿಜವಾದ ಸಂತೋಷ ಪಡೆಯಬಹುದು ಎಂದು ನುಡಿದರು. ಸುಜ್ಞಾನ ಕಡೆಗೆ ಮುನ್ನಡೆಯುದು ಭಾರತೀಯ ಸಂಸ್ಕೃತಿ ಕತ್ತಲೆ ಭಯ ಹುಟ್ಟಿಸಿ ದುಃಖ್ಖ ನೀಡುದು ಬೆಳಕು ಧೈರ್ಯ ಭರವಸೆ ಯ ಸಂಕೇತ ಅಜ್ಞಾನ ಅಂದಕಾರ ದೂರವಾಗಿ ಸಮ್ಯಕ್ ಜ್ಞಾನ ಪ್ರಕಾಶವಾಗಲಿ ಎಂದು ಜೈನರು ಪ್ರತಿ ನಿತ್ಯ ಅಷ್ಟವಿದಾ ರ್ಚನೆ  ಪೂಜೆಯಲ್ಲಿ ದೀಪ ಹೊತ್ತಿಸಿ ಭಗವಂತನಲ್ಲಿ ತಮ್ಮ ಕರ್ಮ ನಾಶ ಪಡಿಸುವ ಆಶಯ ವ್ಯೆಕ್ತ ಪಡಿಸಿ ದೀಪ ಬೆಳಗುವ ಸಂಸ್ಕೃತಿ ನಿತ್ಯ ಅನುಷ್ಠಾನ ಮಾಡುತ್ತಾರೆ ಜಿನ ಮಂದಿರದಲ್ಲಿ ಎಲ್ಲಾರೂ ಸೇರಿ ಇಂತಹ ಶುಭ ಸಂಕಲ್ಪ ಮಾಡಿದಾಗ ಧರ್ಮ ಪ್ರಭಾವನೆ ಆಗುತ್ತೆ ಎಂದು ನುಡಿದರು. 

ಆರತಿ ಭಜನೆ ಅತ್ಯಂತ ಶ್ರದ್ದಾ ಭಕ್ತಿಯಿಂದ ಜರುಗಿತು. ಇದೆ ಸಂಧರ್ಭದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು ಪ್ರಸಿದ್ದ ನ್ಯಾಯ ವಾದಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಂ. ಕೆ ವಿಜಯ ಕುಮಾರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಯಂ ಬಾಹುಬಲಿ ಪ್ರಸಾದ್ ಡಾಕ್ಟರೇಟ್ ಪಡೆದ ಡಾ ಪದ್ಮಜಾ ಧೀರಜ್ ಮೂಡುಬಿದಿರೆ ಇವರನ್ನು ಧವಲತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಮುನಿ ವರ್ಯ, ಭಟ್ಟಾರಕ ಶ್ರೀ ಹರಸಿ ಆಶೀರ್ವದಿಸಿದರು.

ಜೈನ ಸಂಗೀತ  ಗಾನ ರತ್ನಕರ ಕುಬೇರ ಚೌಗೂಲೆ, ಉದ್ ಗಾoವ್,  ಮಹಾ ರಾಷ್ಟ್ರ ಇವರಿಂದ ಭಕ್ತಿ ರಸ ಮಂಜರಿ ನಡೆಸಿ ಕೊಟ್ಟರು ಅವರನ್ನು, ಕಾವ್ಯ ವಾಚನ ಮಾಡಿದ ಯಂ ರವಿರಾಜ್, ಸೂ ರಾ ಲು ಅರಮನೆ ಗಣೇಶ್ ಪ್ರಸಾದ್ ಜೀಜಿ, ನೃತ್ಯ ಗೈದ ಕು  ಅನನ್ಯ ರನ್ನು ಸ್ವಾಮೀಜಿ ಹರಸಿ ಆಶೀರ್ವದಿಸಿದರು.

ಪಟ್ಣ ಶೆಟ್ಟಿ ಸುದೇಶ್ ಕುಮಾರ್ ಸ್ವಾಗತಿಸಿದರು. ಐಶ್ವರ್ಯ ಜೈನ್  ಪ್ರಾರ್ಥನೆ ಮಾಡಿದರು.ಉಪನ್ಯಾಸಕ ನೇಮಿರಾಜ್ ಕಾರ್ಯಕ್ರಮ ನಿರೂಪಿಸಿದರು. ವ್ಯೆವಸ್ಥಾಪಕ ಸಂಜಯಂಥ ಕುಮಾರ್ ಧನ್ಯವಾದ ಇತ್ತರು.

ತಮಿಳು ನಾಡು, ಮಹಾರಾಷ್ಟ್ರ ಕರ್ನಾಟಕ ದ ವಿವಿದೆಡೆ ಗಳಿಂದ ಯಾತ್ರಾರ್ಥಿ ಗಳು ದೀಪೋತ್ಸವ ದಲ್ಲಿ ಪಾಲ್ಗೊಂಡರು ಮೂಡುಬಿದಿರೆ ಅರಮನೆ  ಕುಲ ದೀಪ, ಶಂಬವಕುಮಾರ್, ಹರ್ಷ ಪಡಿವಾಳ್, ಪ್ರಭಾತ್, ಅಜಿತ್, ತಿಲಕ್ ಪ್ರಸಾದ್, ಅಭಿಜಿತ್, ಮಂಜುಳಾ ಅಭಯ ಚಂದ್ರ, ವೃoದ ರಾಜೇಂದ್ರ, ವೀಣಾ, ಅರ್ ಶೆಟ್ಟಿ, ಶ್ವೇತಾ ಜೈನ್, ಜಯರಾಜ್ ಕಂಬಳಿ, ಗುಣಪಾಲ್ ಹೆಗ್ಡೆ ಉಪಸ್ಥಿತರಿದ್ದರು