ಮಂಗಳೂರು:- ದಿನಾಂಕ 25 ಡಿಸೆಂಬರ್ ರಂದು ಸಂಜೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಯವರ 96ನೇ ಹುಟ್ಟು ಹಬ್ಬದ ಪ್ರಯುಕ್ತ , ದ.ಕ ಜಿಲ್ಲಾ ಬಿಜೆಪಿ ಆರೋಗ್ಯ ಪ್ರಕೋಷ್ಟ, ದ.ಕ ಜಿಲ್ಲಾ ಆರೋಗ್ಯ ಭಾರತಿ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಖ್ಯಾತ ವೈದ್ಯರಾದ  ಡಾ| ಚಕ್ರಪಾಣಿ ಅವರು ಕೋರೋನ ನಂತರ ಬದಲಾಯಿಸಿ ಕೊಳ್ಳ ಬೇಕಾದ ಜೀವನ ಶೈಲಿ, ಮಾನಸಿಕ ಸ್ಥಿತಿಗತಿ ಮತ್ತು ಲಸಿಕೆ ಬಗ್ಗೆ ಮಾಹಿತಿ ಉಪನ್ಯಾಸ ನೀಡುತ್ತಿದ್ದರು.  

   ಕೋರೋನ ಲಸಿಕೆ ಬಗ್ಗೆ ಗುಸು ಗುಸು ಸಲ್ಲದು, ಜಯಿಸಲು ಲಸಿಕೆ ಎಂಬುದು ಮಾಸ್ಕ್, ಸ್ಯಾನಿ ಟೈಸರ್, ಸಾಮಾಜಿಕ ಅಂತರದಷ್ಟೇ ಅಗತ್ಯ, ಅದರ ಬಗ್ಗೆ ವದಂತಿ ಹಬ್ಬಿಸಬಾರದು, ವೈದ್ಯಕೀಯ ಸಿಬ್ಬಂದಿ ಹಾಗು ಸರಕಾರಗಳ ಜೊತೆ ಆರೋಗ್ಯ ಜನಜಾಗೃತಿಗಾಗಿ ಎಲ್ಲಾ ಸಂಘ ಸಂಸ್ಥೆ ಮತ್ತು ಕೈಜೋಡಿಸಬೇಕು, ಅದು ಅನಿವಾರ್ಯ, ಸ್ವದೇಶಿ ಇರಲಿ ವಿದೇಶಿ ಇರಲಿ ಭಾರತದ 130 ಕೋಟಿ ಜನರಲ್ಲಿ ಹೆಚ್ಚಿನವರಿಗೆ ಸುಲಭವಾಗಿ ಪರಿಣಾಮಕಾರಿಯಾಗಿ ಕೈಗೆಟುಕುವ ದರದಲ್ಲಿ ಸಿಗುವ ಲಸಿಕೆಗಳಿಗೆ ಒತ್ತು ಕೊಟ್ಟು ಕೋರೋನವನ್ನ ಜಯಿಸಬೇಕಾಗಿದೆ ಎಂದರು.ಬದಲಾದ ಜೀವನಕ್ರಮದ ಬಗ್ಗೆ ಆರೋಗ್ಯ ಭಾರತೀಯ ಪ್ರಮುಖ ನಿಟ್ಟೆ ಯೂನಿವರ್ಸಿಟಿಯ ಹಿರಿಯ ಮಾನಸಿಕ ರೋಗ ತಜ್ಞ, ಹಾಗೂ ಕೋರೋನ ಕಾಲದ ಮಾನಸಿಕ ಅಸಮತೋಲನದ ಬಗ್ಗೆ ಪುತ್ತೂರಿನ ಯುವ ಮಾನಸಿಕ ರೋಗ ತಜ್ಞ ಡಾ ಗಣೇಶ್ ಪ್ರಸಾದ್ ವಿವರಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಎಂ ಯವರು ಅಟಲ್ ಬಿಹಾರಿ ವಾಜಪೇಯಿ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ವಾಜಪೇಯಿ ಅವರ ಬದುಕು ಹೋರಾಟ ರಾಜಕೀಯ ನಾಯಕತ್ವ ದ ಬಗ್ಗೆ ವಿವರಿಸಿದರು.

        ಬಿಜೆಪಿ ಆರೋಗ್ಯ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ,ಶ್ರೀನಿವಾಸ್ ಯೂನಿವರ್ಸಿಟಿಯ ಮುಖ್ಯ ವೈದ್ಯಾಧಿಕಾರಿ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಸ್ವಾಗತಿಸುತ್ತಾ, ವಾಜಪೇಯಿ ಹೇಗೆ ಇಡೀ ರಾಷ್ಟ್ರಕ್ಕೆ ಒಂದು ಜನಜಾಗೃತಿಯ ಬಗ್ಗೆ ಸಫಲರಾದರೊ, ಹಾಗೆ ಇಂದು ಅವರ ನೆನಪಲ್ಲಿ ಕೋರೋನ ಜನರಲ್ಲಿ ಮೂಡಿಸಿದ ಆತಂಕ, ಭಯ, ಆರ್ಥಿಕ ಏರು ಪೇರು, ಮಾನಸಿಕ ತಲ್ಲಣವನ್ನ ಸಾಂತ್ವನದ ಮೂಲಕ ಸರಿದೂಗಿಸ ಬೇಕಾದ ದೊಡ್ಡ ಜವಾಬ್ದಾರಿ ಪಕ್ಷಾತೀತ ವಾಗಿ ಎಲ್ಲಾ ಸಂಘಟನೆಗಳ ಮೇಲಿದೆ. ಕರ್ನಾಟಕ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಟ ಇದನ್ನ ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೆ ಮುಟ್ಟಿಸಲು ಇಂದು ಪಣ ತೊಡಬೇಕು ಎಂದರು.

ಬಿಜೆಪಿ ಆರೋಗ್ಯ ಪ್ರಕೋಷ್ಟದ ಡಾ ಜಿ.ಕ. ಭಟ್, ಡಾ ದಿವಾಕರ್ ರಾವ್, ಡಾ ವಿಷ್ಣು ಪ್ರಭು,ಡಾ ಸುಖೇಶ್ ಕೊಟ್ಟಾರಿ, ಡಾ ನಿಶಾಂಕ ಶೆಟ್ಟಿಗಾರ್,ಡಾ ಆಶಾ ಜ್ಯೋತಿ ರೈ, ಹಾಗೂ ಪ್ರಮುಖರಾದ ಪ್ರಸಾದ್ ಕುಮಾರ್ ಬೆಳ್ತಂಗಡಿ,ಮುಂತಾದವರು ಉಪಸ್ಥಿತರಿದ್ದರು.

ಆರೋಗ್ಯ ಭಾರತೀಯ ಪ್ರಮುಖರಾದ ಪುರುಷೋತ್ತಮ ದೇವಸ್ಯ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.