ಮಂಗಳೂರು ಆ. 09: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು. ಈ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಣಿಪಾಲದ ಎಂ ಐ ಟಿ ಇನ್ಸ್ಟಿಟ್ಯೂಟ್‌ಅಲ್ಲಿ ಸಿವಿಲ್ ಎಂಜಿನಿಯರ್ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ ನಾರಾಯಣ ಶೆಣೈ ದೀಪವನ್ನು ಪ್ರಜ್ವಲಿಸಿದರು. ನಂತರ ಮಾತನಾಡಿದ ಅವರು ನಮ್ಮ ದೇಶದಲ್ಲಿ ಮೆಕಾಲೆ ಶಿಕ್ಷಣವನ್ನು ರೂಢಿಸಿಕೊಂಡಿದ್ದಕ್ಕಾಗಿ ನಾವು ಗುಲಾಮರಾಗಿ ಬಿಟ್ಟಿದ್ದೇವೆ. ದೇಶದಲ್ಲಿ ರಾಷ್ಟಿçÃಯತೆಯ ಕೊರತೆ ಕಾಣುತ್ತಿದೆ. ಮಕ್ಕಳಲ್ಲಿ ರಾಷ್ಟೀಯತೆಯನ್ನು ಮೂಡಿಸಬೇಕಾದರೆ ಕಿತ್ತೂರು ಚೆನ್ನಮ್ಮ, ಉಳ್ಳಾಳದ ರಾಣಿ ಅಬ್ಬಕ್ಕ, ಓಬವ್ವರಂತಹ ವೀರವನಿತೆಯರ ಜೀವನಗಾಥೆಯನ್ನು ತಿಳಿಸಬೇಕು. ದೇಶ ಪ್ರೇಮವನ್ನು ಬೆಳೆಸಬೇಕು ಅದಕ್ಕಾಗಿ ದೇಶದ ಸ್ವಾತಂತ್ರ‍್ಯ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರ ಶೇಖರ್ ಅಜಾದ್, ರಾಜ್‌ಗುರು, ಸುಖ್‌ದೇವ್ ಅಂತಹವರು ಮಕ್ಕಳ ಆದರ್ಶ ವ್ಯಕ್ತಿಯಾಗಬೇಕು. ನಮ್ಮ ಸಮಾಜದಲ್ಲಿ ವರದಕ್ಷಿಣೆಯಂತಹ ಕೆಲವು ಅನಿಷ್ಟ ಪದ್ಧತಿಗಳು ಇನ್ನು ಹಾಗೆ ಇವೆ ಅವು ನಮ್ಮದೇಶ ಬಿಟ್ಟು ಹೋಗಿಲ್ಲ. ಮಕ್ಕಳಲ್ಲಿ ರಕ್ಷಾ ಬಂಧನ ಹಬ್ಬದ ಮೂಲಕ ಹೆಣ್ಣು ಮಕ್ಕಳಿಗೆ ಗೌರವಕೊಡುವುದನ್ನು ಕಲಿಸಬೇಕು ಅಂತಹ ಕೆಲಸಗಳನ್ನು ವಿದ್ಯಾಭಾರತಿಯಂಥ ಸಂಘಟನೆಗಳು ಮಾಡುತ್ತಾ ಬಂದಿವೆ. ಅದ್ಭುತವಾಗಿ ಹುತ್ತವನ್ನು ಕಟ್ಟುವಗೆದ್ದಲು ಹುಳಗಳು ಮರವನ್ನೇತಿಂದು ಹಾಳು ಮಾಡುವಂತೆ ನಮ್ಮ ಮಕ್ಕಳು ಸಮಾಜದಿಂದ ಶಿಕ್ಷಣ ಪಡೆದು ಸಮಾಜಕ್ಕೆ ಮಾರಕವಾಗುವ ಗೆದ್ದಲಿಂನAತೆ ಆಗದೆ ಜೇನುಹುಳುಗಳಂತೆ ಸುಂದರವಾಗಿ ಗೂಡನ್ನು ಕಟ್ಟಿ ಸಮಾಜಕ್ಕೆ ಸಿಹಿಯನ್ನು ನೀಡುವ ಹಾಗೆ ನಮ್ಮ ಮಕ್ಕಳು ಸಮಾಜಕ್ಕೆ ಉತ್ತಮ ಮಾದರಿ ಪ್ರಜೆಗಳಾಗಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಶಾಲಾ ಪ್ರಾಂಶುಪಾಲೆಯಾದ ಶ್ರೀಮತಿ ಬಬಿತಾ ಸೂರಜ್ ಮತ್ತು ಶಿಕ್ಷಕ ಸಿಬ್ಬಂಧಿಗಳು ಕೂಡಿಕೊಂಡು ಡಾ ನಾರಾಯಣ ಶೆಣೈ ಅವರಿಗೆ ರಾಖಿಯನ್ನು ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಆಚರಿಸಿದರೆ. ಮಕ್ಕಳು ಹಾಗೂ ಶಿಕ್ಷಕರೆಲ್ಲರೂ ಸಾಮೂಹಿಕವಾಗಿ ಒಬ್ಬರು ಮತ್ತೊಬ್ಬರಿಗೆ ರಾಖಿಯನ್ನು ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಸಂಭ್ರಮಿಸಿದರು.
ನಂತರ ವಿದ್ಯಾಭಾರತಿ ಕರ್ನಾಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಈಜು ಮತ್ತು ಟೇಬಲ್ ಟೆನಿಸ್ ಸ್ಪರ್ಧೆಯ ಉದ್ಘಾಟನೆಯನ್ನು ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಕದ್ರಿ ಕ್ಷೇತ್ರದಿಂದ ತಂದ ತೀರ್ಥವನ್ನು ಈಜು ಕೊಳಕ್ಕೆ ಪ್ರೋಕ್ಷಣೆಯನ್ನು ಮಾಡುವ ಮೂಲಕ ನೆರವೇರಿಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ ಸಿ ನಾÊಕ್‌ಅವರು ಅಧ್ಯಕ್ಷತೆ ವಹಿಸಿದ್ದರು, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸೂರಜ್, ಜಿಲ್ಲಾ ಶಾರೀರಿಕ ಶಿಕ್ಷಣ ಪ್ರಮುಖ್ ಶ್ರೀಯುತ ಪುರುಷೋತ್ತಮ ಮತ್ತು ಜಿಲ್ಲಾ ಖೇಲ್ ಖೂದ್ ಪ್ರಮುಖ್ ಆಗಿರುವ ಶ್ರೀಯುತ ಕರುಣಾಕರ್ ಉಪಸ್ಥಿತರಿದ್ದರು.
ಶಿಕ್ಷಕಿ ಸಾರಿಕಾ ದಿನದ ಪ್ರಾಮುಖ್ಯತೆಯನ್ನು ವಾಚಿಸಿ, ಶಿಕ್ಷಕ ಶರಣಪ್ಪ ನಿರೂಪಿಸಿ ವಂದಿಸಿದರು.