ಮಂಗಳೂರು, ಮಾರ್ಚ್ 21: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾಗಿ ಮಾರ್ಚ್ 21ಕ್ಕೆ ಆರು ವರುಷ. ನ್ಯಾಯ ಮರೀಚಿಕೆಯಾಗಿದೆ ಎಂದು ನ್ಯಾಯಪರರು ಮತ್ತು ಚಿಂತಕರು ರಥ ಬೀದಿಯ ವೆಂಕಟರಮಣ ದೇವಸ್ಥಾನದಿಂದ ವಿನಾಯಕರ ಮನೆಯವರೆಗೆ ನ್ಯಾಯದ ಹಾದಿಯಲ್ಲಿ ಸೋಮವಾರ ಸಂಜೆ ನಡಿಗೆ ನಡೆಸಿದರು.

ಮಹಿಳಾ ಕಾಂಗ್ರೆಸ್ ಬೆಂಬಲ

ಬಾಳಿಗಾರ ಸಹೋದರಿ ಬಳಗದಿಂದ ಪ್ರಾರ್ಥನೆ

ಡಿವೈಎಫ್‌ಐ ಮತ್ತು ನರೇಂದ್ರ ನಾಯಕ್ ನೇತೃತ್ವದಲ್ಲಿ ನಡಿಗೆ
ವಿನಾಯಕ ಬಾಳಿಗಾರನ್ನು ಈ ದೇವಾಲಯದಲ್ಲಿ ಸಂಚು ಮಾಡಿ ಕೊಂದಿದ್ದಾರೆ. ನಮಗೆ ಕಾಶ್ಮೀರ ಫೈಲ್ಸ್ ಬೇಕಾಗಿಲ್ಲ. ಬಾಳಿಗಾ ಫೈಲ್ಸ್ ಬೇಕಾಗಿದೆ. ಈ ದೇವಾಲಯದ ಅಪರಾ ತಪರಾ ಮಾಡಿದ್ದನ್ನು ಕೇಳಿದ್ದಕ್ಕೆ ಬಾಳಿಗಾರನ್ನು ಕೊಲ್ಲಲಾಗಿದೆ. ಈ ಎಲ್ಲ ದೇವಾಲಯಗಳ ಹಣ ಹೊಡೆದವರು ಇಲ್ಲೇ ದೊಡ್ಡ ಮನುಷ್ಯರಾಗಿ ಓಡಾಡುತ್ತಿದ್ದಾರೆ ಎಂದ ವಿಚಾರವಾದಿ ನರೇಂದ್ರ ನಾಯಕ್ ಅವರು ಹತ್ತಾರು ಗೌಡ ಸಾರಸ್ವತ ನಾಯಕರ ಹೆಸರುಗಳನ್ನು ಹೇಳಿದರು.
ನರೇಂದ್ರ ನಾಯಕ್- ನೂರಾರು ಜನರನ್ನು ಈ ದೇವಾಲಯದ ಮಾಫಿಯಾ ಜನರು ಜೀವಂತ ಕೊಂದಿದ್ದಾರೆ.
ವಿನಾಯಕ ಬಾಳಿಗಾ ಸಹೋದರಿ ಅನುರಾಧಾ ಬಾಳಿಗಾ ನ್ಯಾಯ ಬೇಡುತ್ರೇನೆ ಎಂದು ವೆಂಕಟರಮಣನಲ್ಲಿ ಬೇಡಿಕೊಂಡರು.
ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಆರೆಸ್ಸೆಸ್‌ನ ವಿನಾಯಕ ಬಾಳಿಗಾ ಕೊಲೆ ತನಿಖೆಗೆ ಬೊಮ್ಮಾಯಿ ಸರಕಾರ ಏಕೆ ಮನಸ್ಸು ಮಾಡುತ್ತಿಲ್ಲ ಎಂದು ಸಹ ನರೇಂದ್ರ ನಾಯಕ್ ಹೇಳಿದರು.


ಮಹಿಳಾ ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷೆ ಪುಷ್ಪಾಅಮರನಾಥ್ ಅವರು ಮಾತನಾಡಿ ಇದರಲ್ಲಿ ರಾಜಕೀಯ ಇಲ್ಲ, ನ್ಯಾಯಕ್ಕಾಗಿ ಆಗ್ರಹ ಎಂದು ಹೇಳಿದರು.