ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಾವಣಿಯ ಕಾರ್ಯಕ್ರಮಕ್ಕೆ  ಎಐಸಿಸಿ ಡಿಜಿಟಲ್ ಮೂಲಕ ಎಐಸಿಸಿ ಕಾರ್ಯದರ್ಶಿ ಐವನ್ ಡಿ ಸೋಜ  ಕಂಟೋನ್ಮೆಂಟ್ ವಾರ್ಡಿನಲ್ಲಿ ಚಾಲನೆಯನ್ನು ನೀಡಿದರು. ವಿವಿಧ ವರ್ಗಗಳಿಗೆ ಸೇರಿದ ಜನರನ್ನು ಕಾಂಗ್ರೆಸ್ ಸದಸ್ಯರನ್ನಾಗಿ ನೊಂದಾಯಿಸಿದರು ಮತ್ತು ಕಾಂಗ್ರೆಸ್ ಸದಸ್ಯತ್ವ ನೊಂದಾವಣಿ ಪ್ರತಿ ಮನೆ ಮನೆಗೆ ತೆರಳಿ, ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪುವವರನ್ನು ಸದಸ್ಯರನ್ನಾಗಿ ನೊಂದಾಯಿಸಲು ವಿನಂತಿಸಿದರು. ಕಾಂಗ್ರೆಸ್ ಪಕ್ಷ ಶೀಘ್ರದಲ್ಲಿಯೇ ಅತ್ಯಂತ ಹೆಚ್ಚು ಸದಸ್ಯ ಹೊಂದಿದ ಏಕೈಕ ಪಕ್ಷವಾಗಿದ್ದು, ದೇಶದ ಉದ್ದಗಲಕ್ಕೂ ಸಕ್ರಿಯವಾಗಿ ತೊಡಗಿಕೊಂಡಿರುವುದರಿಂದ ಜನಸೇವೆಯ ಮೂಲಕ ಕೆಲಸಮಾಡಲು ಕರೆ ನೀಡಿದರು. ಅನೇಕ ವಾರ್ಡುಗಳಿಗೆ ತೆರಳಿ ಸದಸ್ಯತ್ವ ನೊಂದಾವಣಿ ಕಾರ್ಯಕ್ರಮವನ್ನು ಚುರುಕುಗೊಳಿಸಿದರು. ಈ ತಿಂಗಳ 31ನೇ ತಾರೀಖಿನವರೆಗೆ ಈ ಕಾರ್ಯಕ್ರಮ ಚಾಲನೆಯಲ್ಲಿದ್ದು,  ಸದಸ್ಯತ್ವ ನೊಂದಾವಣಿಗೆ ಕರೆ ನೀಡಿದರು.  . 

ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಮಹಿಳಾ ಕಾಂಗ್ರೆಸ್ ನಾಯಕಿ ವಿಕ್ಟೋರಿಯ ಡಿ ಸೋಜ, ಮಿಲಾಜ್ ಅತ್ತಾವರ ಮುಂತಾದವರು ಉಪಸ್ಥಿತರಿದ್ದರು.