ಬಂಟ್ವಾಳ: ವಿದ್ಯಾರ್ಥಿ ಜೀವನವು ಮಾನವ ಬದುಕಿನ ಬಹುಮುಖ್ಯಘಟ್ಟ. ವಿದ್ಯಾರ್ಥಿಗಳು ಪಠ್ಯಕ್ಕೆಆದ್ಯತೆ ನೀಡಿದಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಬೇಕು.ನಿಶ್ಚಿತ ಗುರಿಯನ್ನುಇಟ್ಟುಕೊಂಡು ಸಮಯದ ಸದುಪಯೋಗದ ಜತೆಗೆ ಅವಿರತ ಪರಿಶ್ರಮದಿಂದ ಕ್ರಿಯಾಶೀಲ ಚಟುವಟಿಗಳನ್ನು ರೂಢಿಸಿಕೊಳ್ಳಬೇಕು. ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸವಾಲುಗಳನ್ನು ನಾವು ಎದುರಿಸುವುದಕ್ಕೆ ತಯಾರಾಗ ಬೇಕಾದುದು ಅನಿವಾರ್ಯ. ಸ್ವಉದ್ಯೋಗ ಪ್ರವೃತ್ತಿಯನ್ನು, ನಾಯಕತ್ವ ಗುಣವನ್ನು ರೂಢಿಸಿಕೊಳ್ಳುವುದರೊಂದಿಗೆ, ತಮ್ಮ ಹಿರಿಯರೊಡನೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವುದು ಎಲ್ಲಾರ ಆದ್ಯ ಕರ್ತವ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನೆ ನಿರ್ದೇಶಕರು, ಮತ್ತು ಸಹಾಯಕ ಪ್ರಾಧ್ಯಾಪಕ ಡಾ| ರಮೇಶ್ ಸಾಲಿಯಾನ್ ಹೇಳಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಕಾಲೇಜಿನ 2021-22ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಶುಪಾಲ ಡಾ| ಸುಯೋಗ ವರ್ಧನ್ ಡಿ. ಎಮ್ ಅಧ್ಯಕ್ಷತೆ ವಹಿಸಿ, ಉತ್ತಮ ನಾಯಕತ್ವ ಗುಣಗಳನ್ನು ಕಾಲೇಜು ಮಟ್ಟದಿಂದಲೇ ರೂಢಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಬೇಕೆಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಸಹಪ್ರಾಧ್ಯಾಪಕ ಪ್ರೊ. ಮಹಾಬಲೇಶ ಶರ್ಮಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷÀ ಕೋಶಿಕ್ ವಿ ರಾವ್ ಸ್ವಾಗತಿಸಿ, ಉಪಾಧ್ಯಕ್ಷ ಶ್ರೇಯಸ್ ಅತಿಥಿ ಪರಿಚಯ ಮಾಡಿದರು. ಕಾರ್ಯದರ್ಶಿ ನಿಶ್ಮಿತಾ ರೈ ವಿದ್ಯಾರ್ಥಿ ಸಂಘದ ವರದಿ ವಾಚಿಸಿದರು. ಜತೆ ಕಾರ್ಯದರ್ಶಿ ಮೋಕ್ಷ ವಂದನಾರ್ಪಣೆಗೈದರು.