ಜನವರಿ 14ರಂದು ರಾಧಾಕೃಷ್ಣ ದೇವಸ್ತಾನದ ಬಾಳಂಭಟ್ ಹಾಲ್ ನಲ್ಲಿ ಜಿಲ್ಲೆಯ ವಿವಿಧ ವ್ಯಾಪಾರ ವ್ಯವಹಾರ ಸಂಘಟನೆಗಳ ನೇತೃತ್ವದಲ್ಲಿ ಅವೈಜ್ಞಾನಿಕ ಲಾಕ್‌ಡೌನ್ ವಿರೋಧಿಸಿ ಪತ್ರಿಕಾ ಗೋಷ್ಠಿ ನಡೆಯಿತು.
ಕರಾವಳಿ ರೆಡಿಮೇಡ್ ಮತ್ತು ರೆಡಿಮೇಡ್ ಬಟ್ಟೆಗಳ ಒಕ್ಕೂಟದ ಅಧ್ಯಕ್ಷರಾದ ಸಂತೋಷ ಕಾಮತ್ ಮಾತನಾಡಿ, ಲಾಕ್‌ಡೌನ್ ಹಿಂದೆಯೂ ಸಣ್ಣ ವ್ಯಾಪಾರಿಗಳ ಗೋಣು ಮುರಿದಿದೆ. ಇನ್ನು ಲಾಕ್‌ಡೌನ್ ಪೂರ್ಣ ಇಲ್ಲವೇ ಶಿಸ್ತು ಬದ್ಧವಾಗಿ ಮಾಡಿ. ಇಲ್ಲದಿದ್ದರೆ ಕೊರೋನಾ ಕೂಡ ಕಡಿಮೆಯಾಗದು, ಯಾರಿಗೂ ಉಪಯೋಗವಾಗದು. ಈ ಸಂಬಂಧ ನಾವು ಜಿಲ್ಲಾಧಿಕಾರಿ ಸಹಿತ ಸಂಬಂಧಿಸಿದವರಿಗೆ ಮನವಿ ಪತ್ರ ನೀಡಿರುವುದಾಗಿ ಹೇಳಿದರು.
ಬ್ಯೂಟಿ ಪಾರ್ಲರ್ ಗಳ ನಾಯಕಿ ಬಬಿತಾ ಮಾತನಾಡಿ, ನಮಗೆ ವ್ಯಾಪಾರ ಆಗುವುದೇ ಶನಿವಾರ, ಭಾನುವಾರ. ಈ ವೀಕೆಂಡ್ ಕರ್ಫ್ಯೂನಿಂದ ನಮ್ಮ ವ್ಯಾಪಾರ ಹಾಳಾಗಿದೆ. ಸಾಕಷ್ಟು ಬ್ಯೂಟಿ ಪಾರ್ಲರ್‌ಗಳು ಬಾಗಿಲು ಮುಚ್ಚಿವೆ ಎಂದು ಹೇಳಿದರು.
ದೇಶದ ಆರ್ಥಿಕತೆ ನಾಶವಾದ ಬಗೆಗೆ ನಿಮ್ಮಲ್ಲಿ ಸಂಶೋಧಿತ ಅಂಕಿ ಅಂಶಗಳು ಇವೆಯೇ? ಎಷ್ಟು ಜನ ಹಣಕಾಸು ಕುಸಿತದಿಂದ ಆತ್ಮಹತ್ಯೆ ಮಾಡಿಕೊಂಡರು? ಇದರ ಬಗೆಗೂ ಅಧ್ಯಯನ ನಡೆದಿಲ್ಲ. ಕೊರೋನಾ ಕಾಯಂ ಆದರೆ ಅದರ ಚಿಕಿತ್ಸೆಗೆ ವೈಜ್ಞಾನಿಕ ಪರಿಹಾರ ಹುಡುಕಬೇಕು ಹೊರತು ಅವೈಜ್ಞಾನಿಕ ಲಾಕ್‌ಡೌನ್ ಅಲ್ಲ. ಮೆಡಿಕಲ್ ಮಾಫಿಯಾ, ಲಸಿಕೆ ಮಾಫಿಯಾದವರು ಕೊರೋನಾ ಕಾಯಿಲೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಎಂ. ಜಿ. ಹೆಗ್ಡೆ ಹೇಳಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಎಂ ಜಿ ಹೆಗಡೆ ಹಾಗೂ ಕರಾವಳಿ ಟೆಕ್ಸ್ ಟೈಲ್ , ಗಾರ್ಮೆಂಟ್ ಮತ್ತು ಪುಟ್ ವೇರ್ ಅಸೋಸಿಯೇಷನ್,ಜಿಲ್ಲಾ ಸವಿತಾ ಸಮಾಜ, ಜಿಲ್ಲಾ ಬ್ಯೂಟಿ ಪಾರ್ಲರ್ ಗಳ ಸಂಘ, ಸೌಂಡ್ ಮತ್ತು ಲೈಟ್ ಎಸೋಸಿಯೇಶನ್ , ಜಿಲ್ಲಾ ಪೊಟೋಗ್ರಾಫರ್ ಎಸೋಸಿಯೇಶನ್ , ಚೇಂಬರ್ ಆಫ್ ಕಾಮರ್ಸ್ ಉಪ್ಪಿನಂಗಡಿ, ಜಿಲ್ಲಾ ಮೊಬಾಯಿಲ್ ವರ್ತಕರ ಸಂಘ ಮತ್ತು ಶಾಮಿಯಾನ ವರ್ತಕರು, ಇತ್ಯಾದಿ ಸಂಘ ಸಂಸ್ಥೆಗಳ ಮುಖಂಡರು ಮಾತನಾಡಿದರು. ಗುರು ದತ್ ಕಾಮತ್, ವಸಂತ್ ಮೊದಲಾದವರು ಉಪಸ್ಥಿತರಿದ್ದರು.